Pages

Thursday, 20 November 2014

ಕಹಳೆ ತಂಡದ ಕೃಪೆಯಿಂದ,
ನಾನು ಬರೆದ ಲೇಖನ ಇಲ್ಲಿದೆ ಗೆಳೆಯರೇ. .. ಓದಿ ಹೇಗಿದೆ ಎಂದು ತಿಳಿಸಿ. ..:) :))
ಕಹಳೆ - ದಿನ ೨೧ - ಸತ್ಯದರ್ಶನ - ಒಂದು ಅನುಭವ


ಸತ್ಯದರ್ಶನ - ಒಂದು ಅನುಭವ

ಕಾರು ಬೈಕು ಇವೆಲ್ಲಾ ಆಧುನಿಕ ಜಗತ್ತಿನ ಅದ್ಭುತ ಸಂಚಾರಿ ಸಾಧನಗಳಾಗಿ ಹೊರಹೊಮ್ಮಿದ್ದರೂ ಆರ್ಥಿಕವಾಗಿ ಆ ಮಟ್ಟಕ್ಕಿನ್ನೂ ಬೆಳೆದಿಲ್ಲವಾದ್ದರಿಂದ ದಿನಂಪ್ರತಿ ಬಸ್ಸನ್ನು ನೆಚ್ಚಿಕೊಳ್ಳುವುದು ನನ್ನ ಜಾಯಮಾನ. ಹೀಗೇ ನೆಡೆಯುತ್ತಿರುವಾಗ ಒಂದುದಿನ ನನಗಾದ ಅನುಭವ ಇದು.

ನಾನು ಹತ್ತಬೇಕಾದ ನಿಲ್ದಾಣದಲ್ಲಿ ನಾನಾಗಲೇ ಕಾಯುತ್ತಾ ನಿಂತಿದ್ದೆ. ಏಕೆಂದರೆ ಒಮ್ಮೆ ಈ ಬಸ್ಸು ತಪ್ಪಿದರೆ ಇನ್ನೂ ಹದಿನೈದು ನಿಮಿಷ ಕಾಯುವ ವ್ಯವಧಾನ ಖಂಡಿತ ನನಗಿಲ್ಲ. ತಲುಪಬೇಕಾದ ಸ್ಥಳ ಸುಮಾರು ಮುಕ್ಕಾಲು ಘಂಟೆಯ ಸಮಯಯನ್ನು ಒಳಗೊಂಡಿದ್ದರಿಂದ ಯಾವಾಗಲೂ ತೇಜಸ್ವಿಯವರದ್ದೋ ಇಲ್ಲ ಯಂಡಮೂರಿಯವರದ್ದೋ ಪುಸ್ತಕಗಳು ಬ್ಯಾಗಿನ ಒಳಗಿರುತ್ತಿದ್ದವು. ನೋಡುತಿದ್ದಂತೆ ನನ್ನ ಬಸ್ಸು ಬಂದಿತು. ನಿರ್ವಾಹಕ 'ಉಡುಪಿ , ಉಡುಪಿ....' ಎಂದೊಮ್ಮೆ ಜೋರಾಗಿ ಕೂಗಿದ. ನಾನೂ ಸೇರಿದಂತೆ ಒಂದೈದು ಜನ ಹತ್ತಿಕೊಂಡೆವು. ಹಿಂದಿನ ಮೂಲೆಯ ಕಿಟಕಿಯ ಪಕ್ಕದ ಸೀಟ್ ಹಿಡಿಯುವುದು ಅಭ್ಯಾಸ. ಹತ್ತಿದ ಕೆಲವೇ ಕ್ಷಣಗಳಿಗೆ ನನ್ನ ಟಿಕೆಟ್ ನನ್ನ ಕೈ ಸೇರಿತ್ತು. ಮಾಮೂಲಿ ಅಭ್ಯಾಸದಂತೆ ಬ್ಯಾಗಿನೊಳಕ್ಕೆ ಕೈ ಹಾಕಿದೆ ತಕ್ಷಣಕ್ಕೇನೂ ಸಿಗಲಿಲ್ಲ. ಮತ್ತೊಮ್ಮೆ ಕೈಯಾಡಿಸಿದೆ ಈ ಬಾರಿ ಆಶ್ಚರ್ಯಗೊಳ್ಳಲೇ ಬೇಕಾದ ಸರದಿ ನನ್ನದಾಗಿತ್ತು. ಮೊದಲ ಬಾರಿಗೆ ನಾನು ಯಾವುದೇ ಕಾದಂಬರಿ ಇಲ್ಲದೇ ಬಸ್ಸು ಹತ್ತಿದ್ದೆ! . ಎಫ್.ಎಂ. ಕೇಳುವ ಹವ್ಯಾಸ ನನಗಿರಲಿಲ್ಲ. ಮೊದಲ ಬಾರಿಗೆ ನಾನೆಂದೂ ಬಿಡುವಾಗಿ ಮಾಡದ ಕೆಲಸವೊಂದನ್ನು ಮಾಡಹತ್ತಿದೆ. ಅದು 'ಯೋಚನೆ' - ನಾನು ಯೋಚನೆ ಮಾಡಹತ್ತಿದೆ!!

ನನ್ನ ಯೋಚನೆಗಳು ಎಲ್ಲಿಂದೆಲ್ಲಿಗೋ ಹೋಗುತ್ತಿದ್ದವು. ರಾಜ್ಯ, ರಾಷ್ಟ್ರ, ಕಾಲೇಜು ಹೀಗೇ ಎಲ್ಲೆ ಇಲ್ಲದಂತೆ ಯಾವುದೇ ಕೊನೆಯಿಲ್ಲದೇ ವೇಗವಾಗಿ ಅನಂತವಾಗಿ ಸಾಗಿದ್ದವು. ಒಮ್ಮೆ ನನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯತ್ತ ನೋಡಿದೆ ಎಲ್ಲೋ ನೋಡಿದಂತಿದೆ.... ಅರೇ ಇವರು ನನ್ನ ಹಳೇ ಶಾಲೆಯ ಟೀಚರ್ ಅಲ್ಲವೇ? ಸರಿ ಮತ್ತೇನೂ ಮಾಡಲಾಗದೆ ಅವರನ್ನೊಮ್ಮೆ ಮಾತನಾಡೋಣ ಎನ್ನಿಸಿತು. ಸ್ಡಲ್ಪ ಮುಜುಗರವಾದರೂ ನಾನೇ ಶುರು ಮಾಡಿದೆ...

'ಹಾಯ್ ಸರ್' ಬಲಗೈ ಎತ್ತಿ ಒಮ್ಮೆ ಆಡಿಸಿದೆ.

'ಹಾಯ್....' ನನ್ನಲ್ಲಿ ಉಂಟಾದ ಸಮಾನ ಆಶ್ಚರ್ಯ ಅವರಿಗಾಗಿತ್ತು. ಬೆಂಗಳೂರಿನಲ್ಲಿ ಇರಬೇಕಾದ ಅವರು ಅಚಾನಕ್ಕಾಗಿ ಇಲ್ಲಿರುವುದು ನನಗೂ ಆಶ್ಚರ್ಯ ಉಂಟುಮಾಡಿತ್ತು. ಕೆಲವು ಕ್ಷಣಗಳವರೆಗೆ ನಾವಿಬ್ಬರೂ ಹಳೆಯ ಶಾಲೆಯ ಬಗ್ಗೆ, ಈಗಿನ ಸಮಾರಂಭ-ಅತಿಥಿಗಳ ಆಗಮನ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದೆವು. ಆದರೆ ನನ್ನ ಗಮನಕ್ಕೆ ಬಂದ ಒಂದು ವಿಷಯವೆಂದರೆ ನಾನು ಬಂದಮೆಲೂ ಏನೂ ಬದಲಾವಣೆ ಆಗಿರಲಿಲ್ಲ. ಎಲ್ಲವೂ ಕರಾರುವಕ್ಕಾಗಿ ನಾನು ಹಿಂದೆ ಅನುಭವಿಸಿದ - ಭಾಗಿಯಾಗಿದ್ದ ಘಟನೆಗಳೇ ನೆಡೆದಿದ್ದವು ಅನ್ನಿಸುತ್ತಿತ್ತು. ಹೇಗೆ...?

'ಟಣ್...!!'

ಸದ್ದಾದೆಡೆಗೆ ನೋಡಿದೆ. ಲಿಖಿತ್.... ನನ್ನ ಹಳೆಯ ಶಾಲೆಯ ಅತ್ಯಾಪ್ತ ಗೆಳೆಯ. ಆದರೆ ಅವನಿಲ್ಲಿ?? ಒಂದೇ ಬಾರಿಗೆ ಹಳೆಯ ಶಾಲೆಯ ಇಬ್ಬರು ವ್ಯಕ್ತಿಗಳು? ಈ ಬಾರಿ ನನ್ನ ಎದೆ ಬಡಿತ ಹೆಚ್ಚಾದದ್ದು ಸ್ಪಷ್ಟವಾಗಿ ಕೇಳುತ್ತಿತ್ತು. ಈ ಬಾರಿ ಇನ್ನೂ ಹೆಚ್ಚಿನ ಆಶ್ಚರ್ಯದೊಂದಿಗೆ ಪಕ್ಕಕ್ಕೆ ನೋಡಿದೆ.. ಅರೇ ಯಾರೂ ಇಲ್ಲ!! ನನ್ನ ಹಳೆಯ ಶಿಕ್ಷಕರು, ಅವರು ಇಲ್ಲೇ ಇದ್ದರು ಈಗತಾನೇ ಆದರೆ ಈಗ.. ನನ್ನ ಯೋಚನೆ ಮುಗಿಯುವಷ್ಟರಲ್ಲಿಯೇ ಲಿಖಿತ್ ಬಂದು ಮಾಮೂಲಿಯಂತೆ ಕೈ ಬೀಸಿ ಹಾಯ್ ಎಂದ. ನಾನೂ ಅಭ್ಯಾಸದಂತೆಯೇ ಒಮ್ಮೆ ಕೈ ಬೀಸಿ ಇಲ್ಲಿ ಕರೆದೆ. ನನ್ನ ಬಳಿಗೆ ಬಂದಾಕ್ಷಣ ನಾನೇ ಮೊದಲು ಮಾತು ಪ್ರಾರಂಬಿಸಿದೆ.

'ಹಾಯ್. ನಮ್ಮ ಶಾಲೆಯ ಶಿಕ್ಷಕರು ಇಲ್ಲಿಯೇ ಪಕ್ಕದಲ್ಲಿಯೇ ಇದ್ದರು ನೋಡಿದೆಯಾ?'

'ಯಾರು?? ನಿನ್ನ ಪಕ್ಕದಲ್ಲಿಯೇ ಯಾರೂ ಇರಲಿಲ್ಲವಲ್ಲ! ನಿನ್ನ ಸುತ್ತಮುತ್ತ ಯಾರೂ ಇರಲಿಲ್ಲ ಅದಕ್ಕೇ ನಿನ್ನನ್ನು ಗುರುತಿಸಲು ಸಾಧ್ಯವಾಗಿದ್ದು!' ಆಶ್ಚರ್ಯವಾದರೂ ಆಗ ನೆಡೆದಿದ್ದು ನನ್ನ ಭ್ರಮೆ ಎಂದುಕೊಂಡು ಸುಮ್ಮನಾಗಿಬಿಟ್ಟೆ. ಅದಾದ ಮೇಲೆ ಸ್ವಲ್ಪ ಹೊತ್ತು ಅದೇ ಹಳೆಯ ನೆನಪುಗಳಿಗೆ ಬಣ್ಣ ಕೊಟ್ಟೆವು. ಜಾಸ್ತಿ ಹೊತ್ತಾಗತೊಡಗಿತ್ತು. ಆದರೆ ನನ್ನ ಆ ಕಡೆಯ ತೀರ ಇನ್ನೂ ಬಂದಿಲ್ಲ!.

'ಸರಿ ಕಣೋ ನನಗೆ ಟೈಮ್ ಆಯ್ತು ಇನ್ನೊಂದಿನ ಬರ‍್ತೀನಿ' ಅವನಿಂದ ಬಂದ ಆ ತಿಲಾಂಜಲಿಗೆ ನಾನು 'ಸರಿ ಕಣೋ, ಮತ್ತೊಮ್ಮೆ ಸಿಗೋಣ.' ಎಂದೆ. ನಾವಿಬ್ಬರೂ ಎಂಟು ವರ್ಷಕ್ಕೂ ಹೆಚ್ಚಿನ ಗೆಳೆಯರಾದ್ದರಿಂದ ಮಾತುಗಳು ತುಂಬಾನೆ 'ಇನ್ ಫಾರ‍್ಮಲ್' ಆಗಿದ್ದವು. ನಾನು ಅವನನ್ನು ಬೀಳ್ಕೊಡಲು ಮೇಲೇಳಲು ನನ್ನ ತೊಡೆಯ ಮೇಲಿದ್ದ ಬ್ಯಾಗನ್ನು ಪಕ್ಕಕ್ಕಿಟ್ಟೆ. ಸರಿ '......' ಅರೇ!! ಲಿಖಿತ್ ಹಾಗಿರಲಿ ಈಗ ಬಸ್ಸಿನಲ್ಲಿದ್ದವರು ಯಾರೂ ಕಾಣುತ್ತಿಲ್ಲ!!

ಅಸಲಿಗೆ ನಾನು ಬಸ್ಸಿನಲ್ಲಿಯೇ ಇರಲಿಲ್ಲ. ನಾನು ಶಾಲೆಯಲ್ಲಿದ್ದೆ. ಈಗಿನದಲ್ಲ ಹಳೆಯದು!!!!. ಯಾಕೋ ಈ ಶಾಲೆ ಇವತ್ತು ಮತ್ತೆ ಮತ್ತೆ ತನ್ನ ಕಬಂಧ ಬಾಹುಗಳಿಂದ ನನಗೆ ಕಾಡುತ್ತಿದೆಯಲ್ಲಾ.. ಎನ್ನಿಸಿತು. ಇದನ್ನೇನಾದರೂ ಮುಂದೊಮ್ಮೆ ಬರೆದರೆ ಐದಾರು ಆಶ್ಚರ್ಯಕರ ಚಿಹ್ನೆಗಳನ್ನು ಹಾಕಬಹುದುತ್ತು. (ಅದನ್ನು ಈಗ ಹಾಕಿದ್ದೇನೆ...!!).

ನನ್ನ ಗೆಳೆಯರು, ನಾನು ಎಲ್ಲರೂ ನನಗೀಗ ಕಾಣುತಿತ್ತು. ನಾನೇನೋ ಹೇಳುತಿದ್ದೆ. ಏನದು?? ಈ ತರಹದ ಕುತೂಹಲ ಎಲ್ಲರಂತೆ ನನಗೂ ಇತ್ತು. ನಿಧಾನವಾಗಿ ಅತ್ತ ನೆಡೆದೆ. ಯಾವುದೋ ಸಿನಿಮಾದಂತೆ ಕಾಣುತಿತ್ತು. ನಾನು ಅದೃಶ್ಯ ಮಾನವನೋ, ಇಲ್ಲಿ ನೆರೆದಿರುವರಿಗೆಲ್ಲಾ 'ನನ್ನನ್ನು' ನೋಡಿದಾಗ ಏನೆನ್ನಿಸಬಹುದು? ನನ್ನ ಮನಸ್ಸು ಪಕ್ಕಾ ಸಿನಿಮೀಯವಾಗಿ ಯೋಚಿಸಹತ್ತಿತು. ಅವರೆಲ್ಲರ ಮಾತುಗಳು ಕೇಳುತ್ತಿದ್ದವು.

'ಈ ರಿಸಲ್ಟ್ ಬಂದ್ಬಿಟ್ಟರೆ ಮತ್ತೊಮ್ಮೆ ಇಲ್ಲಿ ತಲೆಹಾಕಿಯೂ ಮಲಗುವುದಿಲ್ಲ ಕಣೋ' ಮತ್ತೊಂದು ಇನ್ ಫಾರ‍್ಮಲ್ ಮಾತು.

'ನಾನೂ ಅಷ್ಟೇ ಕಣೋ. ಕಮ್ಮಿ ಮಾರ್ಕ್ಸ್ ಬರೋದಂತು ಗ್ಯಾರೆಂಟಿ, ಅದ್ಯಾವ ಮುಖ ಎತ್ತಿಕೊಂಡು ಇಲ್ಲಿಗೆ ಬರೋದು?' ಇದು ನನ್ನ ಸ್ವರದಂತೆ ಕೇಳಿತು. ನನಗೆ ಎಪ್ಪತ್ನ್ಲಾಲ್ಕು ಪ್ರತಿಶತ ಬಂದಿದ್ದರೂ ಅದು ಆಗಲೂ ನನಗೆ ಕಮ್ಮಿ ಎಂದೆನ್ನಿಸತೊಡಗಿದ್ದು ಸತ್ಯ.

ಅದೆಲ್ಲಾ ಮಂಜಾಗತೊಡಗಿತು. ಏನೂ ಕಾಣುತ್ತಿರಲಿಲ್ಲ. ನನ್ನ ಗೆಳೆಯರು.. ನಾನು... ಉಹೂಂ.. ಇಲ್ಲ, ಏನೂ ಇಲ್ಲ... ನಾನು ಅಲುಗಾಡುತ್ತಿರುವುದು ಅರಿವಿಗೆ ಬಂತು. ಅದಲ್ಲ, ಯಾರೋ ತಳ್ಳುತ್ತಿದ್ದಾರೆ ಅಲುಗಾಡಿಸುತ್ತಿದ್ದಾರೆ. ಈಗ ಕಾಣತೊಡಗಿತು. ನನ್ನ ಪಕ್ಕದ ಸೀಟಿನವ. ಉಡುಪಿ, ಅಂದರೆ ನಾನು ಇಳಿಯಬೇಕಾದ ಸ್ಥಳ ಬಂತೆಂದು ಸನ್ನೆ ಮಾಡಿದ. ಮೌನವಾಗಿ ಕೆಳಗಿಳಿದೆ. ಹತ್ತಿರದ ವಿರಾಮ ಕುರ್ಚಿಯಲ್ಲಿ ಕುಳಿತೆ. ನನ್ನ ಸರ್ ಬಳಿ ಮಾತನಾಡುವಾಗ ಏಕೆ ನನಗೆ ಹಿಂದೆ ನೆಡೆದಿದ್ದ ವಿಷಯಗಳ ಬಗ್ಗೆಯೇ ಮಾತನಾಡುತ್ತಿದ್ದೆನೆಂದು ಅರ್ಥವಾಯಿತು. ನನಗೆ ಈಗಿನ ಸಂಗತಿ ಗೊತ್ತಿದ್ದರಲ್ಲವೇ ಅದರ ಬಗ್ಗೆ ಕನಸುಗಳು ಬೀಳುವುದು!?. ನಾನೇ ಕರೆದ ಸ್ವಪ್ನ ಪಾತ್ರಕ್ಕೆ ಅಂತ್ಯದ ಗುರುತೆಲ್ಲಿದೆ? ಇಷ್ಟಕ್ಕೂ ನನಗೆ ಬಿದ್ದ ಕನಸು ನನ್ನ ಶಾಲೆ ಸಂಗತಿಗಳ ಬಗ್ಗೆಯೇ ಏಕೆ ತಿರುಗುತಿತ್ತು? ಇದಕ್ಕೆ ಉತ್ತರ ತಿಳಿಯಲು ಹೊರಟಾಗ ಬೆಳಿಗ್ಗೆ ನನ್ನ ಹಳೆಯ ಶಾಲೆಯ ಗೆಳೆಯರು ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಕಾರ್ಯಕ್ರಮವೊಂದಿದೆ, ಬರಬೇಕೆಂದು ಕರೆದಿದ್ದರು. ನಾನು ತುಂಬು ಹೃದಯದಿಂದ ಒಪ್ಪಿಕೊಂಡಿದ್ದು ಜ್ಞಾಪಕಕ್ಕೆ ಬಂದಿತು.

ಅಬ್ಬಾ!! ಸಮಯ ಕಳೆದಂತೆಲ್ಲಾ ಕಹಿ ಘಟನೆಗಳಾವುದೇ ಇರಲಿ ಒಲುಮೆ ಇಟ್ಟುಕೊಂಡ, ನೆನಪುಗಳನ್ನು ಉಳಿಸಿದ ಯಾವುದೇ ವಸ್ತುವಾದರೂ ಜೀವವಾದರೂ ಅದನ್ನು ಎದುರಿಗೆ ತೋರ್ಪಡಿಸದೇ ಇದ್ದರೂ ಒಳಗೊಳಗೇ ಅದರೆಡೆಗೆ ವಿಶೇಷವಾದುದೊಂದು ಕಾಳಜಿ-ಜವಾಬ್ದಾರಿ ಹಾಗೂ ಮುಖ್ಯವಾಗಿ ಪ್ರೀತಿ ಇರುತ್ತದೆ ಎಂಬುದು ಎಂತಹ ಅದ್ಭುತ ಸತ್ಯ ಅನ್ನಿಸಿತು.

ಕೊನೆಯ ಪ್ರಶ್ನೆ - ಈ ಸತ್ಯದರ್ಶನಕ್ಕೆ ಕಾರಣವಾದ ಕನಸಿನ ಲೊಕಕ್ಕೆ ಕರೆದೊಯ್ಯಲು ಯಾವುದೇ ಪುಸ್ತಕ ತರದಂತೆ ಮಾಡಿದ ಮರೆವಿಗೊಂದು ಧನ್ಯವಾದ ಹೇಳಲೇ!!??

Tuesday, 4 November 2014


Part -3


" ಜರವಾ...!! "
"ಹೌದು...!ನಾನು ಜರವಾ ಕಾಡು ಜನರ ಗುಡಾರವೊಂದರ ಒಳಗಿದ್ದೆ.ಮೊದಲು ಯಾವುದೋ ಕಾಡು ಜನರ ಪಂಗಡ ಒಂದರ ಗುಡಿಸಲು ಎಂದು ಮಾತ್ರ ಗೊತ್ತಾಗಿತ್ತು.ಆದರೆ ಕ್ರಮೇಣ ನಾನು ಓದಿದ್ದ ಹಲವು ರಿಸರ್ಚ್ ಜರ್ನಲ್ ಗಳು ಕಣ್ಣಮುಂದೆ ಸುತ್ತತೊಡಗಿದ್ದವು.ನಾಗರೀಕತೆಯ ಸಣ್ಣ ಗಾಂಧಲೆಯೂ ಇಲ್ಲದೆ ಹಾಯಾಗಿ ಬದುಕುತ್ತಿರುವ ಏಕಮಾತ್ರ ಕಾಡುಪಂಗಡ ನಮ್ಮ ದೇಶದಲ್ಲಿ.ಇವೆಲ್ಲ ನನಗೆ ತಿಳಿದಿದ್ದು ನಾನು ಮತ್ತೆ ಕಣ್ಣುಬಿಟ್ಟಾಗಲೇ.ಆಗ ನಾನು ಗುಡಿಸಲಲ್ಲಿ ಒಂಟಿಯಾಗಿದ್ದೆ.ನಿಧಾನವಾಗಿ ಎದ್ದು ಹೊರಬಂದೆ.ಯಾವುದೋ ನಿಶ್ಶ್ಯಕ್ತಿ ನನ್ನನ್ನು ಆವರಿಸಿಕೊಂಡಿತ್ತು,ಡ್ರಗ್ಸ್ ಅನ್ನು ಸೇವಿಸಿದ ಜೀವವಂತೆ ನಾನು ತೇಲಾಡುತಿದ್ದೆ.ನನ್ನ ಕಾಲುಗಳು ತಮ್ಮ ಸ್ವಂತ ಸಮತೋಲನವನ್ನು ಕಂಡುಕೊಳ್ಳಲು ಹೆಣಗಾಡುತಿದ್ದವು.ಪಕ್ಕದಲ್ಲೇ ಇದ್ದ ಮಣ್ಣು ಕಲ್ಲುಗಳಿಂದ ನಿರ್ಮಿತವಾದ ಗೋಡೆಯನ್ನು ಆಧಾರವಾಗಿಸಿ ಹೊರನೆಡೆದೆ.ಪ್ರಖರವಾಗಿಯೇ ತನ್ನ ಅರಿವನ್ನು ತೋರ್ಪಡಿಸುತಿದ್ದ ಸೂರ್ಯನ ಕಿರಣಗಳು ನನ್ನ ಕಣ್ಣನ್ನು ಕುಕ್ಕಿದವು.ಸುಧಾರಿಸಿಕೊಂಡು ನೋಡಿದಾಗ ನನಗೆ ಇನ್ನೊಂದು ಅಚ್ಚರಿಯೇ ಕಾದಿತ್ತು.ನಾನು ಇದ್ದ ಗುಡಿಸಲ ಹೊರಗೆ ದೊಡ್ಡ ಸಭೆಯೇ ಸೇರಿತ್ತು.ಕಪ್ಪು ವರ್ಣದ ಹಲವು ಜನರು ನನ್ನನ್ನೇ ತಮ್ಮ ಕಣ್ಣುಗಳಿಂದ ಪಿಳಿ ಪಿಳಿ ನೋಡುತ್ತಾ ಇದ್ದರು.ಅವರು ನನಗೆ ಏನೋ ಹೇಳಲು ಪ್ರಯತ್ನಿಸುತ್ತಿದ್ದರು,ಆದರೆ ಭಾಷಾ ವೈಪರೀತ್ಯ ನಮ್ಮ ಸಂವಹನ ಕ್ರಿಯೆಯನ್ನು ಮುಂದುವರೆಯದಂತೆ ಮಾಡಿತ್ತು.
ಸನ್ನೆ ಮಾಡುತ್ತಾ ಮಾತನಾಡತೊಡಗಿದೆವು.
ಅವರಿಗೆ ನಾನು ಬಂದದ್ದು ಇಲ್ಲಿ ಜ್ಞಾನ ತಪ್ಪುವಂತೆ ಮಾಡಿದ್ದಕ್ಕೆ ಕ್ಷಮೆ ಬೇಡಿದರು.ಅವರಿಗೆ ನಾನೊಂಬ್ಬ ಆಗುಂತಕನಾಗಿ ತೋರಿದೆನಂತೆ. ಅದಕ್ಕೆ ಈ ರೀತಿ ಮಾಡಿದರಂತೆ. ಸ್ವಲ್ಪ ಹೊತ್ತು ನನ್ನೊಂದಿಗೆ ಹೀಗೆ ಹರಟುತ್ತಾ ಇರುವಾಗ ಒಂದು ಬಸ್ಸಿನ ಶಬ್ಧ ಕೇಳಿತು. ನನಗೆ ನೆನಪಾಯಿತು, ಹೀಗೆ ದಿನದಲ್ಲಿ ಕೆಲವು ನಿರ್ಧಾರಿತ ಸಮಯದಲ್ಲಿ ಮಾತ್ರ ಅದೂ ತಕ್ಕಮಟ್ಟಿನ ಸುರಕ್ಷತೆಯೊಂದಿಗೆ ಬರುತ್ತಿದ್ದವು. ನಾನು ಇಲ್ಲಿಂದ ನನ್ನ ಸ್ವಂತ ಊರಿಗೆ ಹೋಗಲು ಇಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದವರನ್ನು ಭೇಟಿಯಾಗಬೇಕಿತ್ತು. ನಾನು ರಸ್ತೆ ತಲುಪುವ ವೇಳೆಗೆ ಬಸ್ಸು ನನ್ನ ಕೈಲಿ ಓಡಿಯೂ ತಲುಪಲಾರದಷ್ಟು ದೂರ ಹೋಗಿಯಾಗಿತ್ತು.
ಆದರೆ ನನ್ನ ಅವಕಾಶಗಳು ಮುಗಿದಿರಲಿಲ್ಲ.
ಒಮ್ಮೆ ಹೋದ ಬಸ್ಸುಗಳು ಮತ್ತೆ ಬರುತಿದ್ದವು.
ಕಾಯುತ್ತಾ ಕುಳಿತೆ. ಕೊನೆಯ ಕೆಲವು ಕ್ಷಣಗಳು ಉಳಿದಿರುವಾಗ ನನ್ನ ಜೊತೆ ಇಷ್ಟು ದೂರದವರೆಗೆ ಬಿಡುವ ಸಲುವಾಗಿ ಜೊತೆಗಾರರಾಗಿ ಬಂದಿದ್ದವರೆಲ್ಲ ಹೊರಡತೊಡಗಿದರು. ಸಾಮಾನ್ಯ ಬೀಳ್ಕೊಡುಗೆ ನಂತರ ಯಾರೂ ಇರಲಿಲ್ಲ.
ಒಬ್ಬನೇ ಕಲ್ಲೊಂದರ ಮೇಲೆ ಕುಳಿತಿದ್ದೆ. ಆಗ ಕೇಳಿಸಿತು ಭಾರವಾದೊಂದು ಹೆಜ್ಜೆ ಸದ್ದು. ನನ್ನೆಡೆಗೆ ಒಬ್ಬ ಜರವಾದ ಮುದುಕನೊಬ್ಬ ಬರುತಿದ್ದ.
ಬಂದವನೇ, " ಮಗೂ ನಿನಗೆ ನಾನೊಂದು ವಿಷಯ ಹೇಳಬೇಕು" ಎಂದ ನಾಗರಿಕವಾಗಿ ಅಧೀಕೃತವಾಗಿರುವ ಭಾಷೆ!!
" ...ಹೇಳಿ..." ಎಂದು ತಡವರಿಸುತ್ತಾ ಕೇಳಿದೆ.
" ಮಗೂ ನಿನ್ನ ತಾಯಿ ಯಾರೆಂದು ನಿನಗೆ ಗೊತ್ತೆ? "
ಶಾಲೆಗಳಲ್ಲಿ, ಇಂಟರ್ವ್ಯೂಗಳು ಮುಂತಾದ ಕಡೆಗಳಲ್ಲಿ ಈ ಉತ್ತರ ಇಲ್ಲದ ಪ್ರಶ್ನೆಯನ್ನು ಕೇಳಿದಾಗಲೆಲ್ಲ ತುಂಬಾನೇ ಹಿಂಸೆಗೊಳಗಾಗಿದ್ದೆ. ಈಗ ಆ ಪ್ರಶ್ನೆ ಮತ್ತೆ ಕೇಳಿದ್ದೆ,  ಅದೂ ಯಾವೊಂದು ಸಣ್ಣ ಊಹೆಯೂ ಇರಲಿಲ್ಲದೇ.
" ಗೊತಿಲ್ಲ " ಎಂದೆ , ನನ್ನ ಉತ್ತರದಲ್ಲಿನ ನಿರ್ಲಿಪ್ತತೆ ನನಗೇ ತಿಳಿಯುತಿತ್ತು.
" ಜಾಸ್ತಿ ಹೇಳಲು ಬಯಸುವುದಿಲ್ಲ. ಈ ನಿನ್ನ ನೀಲಿ ಹೆಜ್ಜೆಗಳನ್ನು  ನಾನು ಮೊದಲ ಬಾರಿಗೆ ನೋಡುತ್ತಿರುವುದು ಅಲ್ಲ!!. ಇಪ್ಪತ್ತು-ಇಪ್ಪತ್ತೈದು ವರ್ಷಗಳ ಮುಂಚೆ ಒಬ್ಬ ವ್ಯಕ್ತಿ ಹೀಗೆ ಏನನ್ನೋ ಹುಡುಕುತ್ತಾ ಬಂದಿದ್ದಾಗ ಇಲ್ಲಿ ತುಂಬಾ ದಿನ ಇದ್ದ. ಅವನೇ ನನಗೆ ಕನ್ನಡ ಕಲಿಸಿದ್ದೂ ಅವನೇ. ಆತ ಯಾರ ಮನಸ್ಸಿಗೆ ಹೇಗೆ ಅನ್ನಿಸಿತೋ ಗೊತ್ತಿಲ್ಲ . ಆತ ನಮ್ಮಲ್ಲಿ ಹೇಗೆ ಹೊಂದಿಕೊಂಡ ಎಂದರೆ ನನ್ನ ಮಗಳು ಐರಾ... (ಏನೋ ಉಚ್ಚರಿಸಲಾಗದ ಹೆಸರೊಂದನ್ನು ಹೇಳಿದ ಶಶಿಧರ್ ರವರೆ), ಆಕೆಯನ್ನು ಅವನಿಗೆ ಕೊಟ್ಟು ಬಿಟ್ಟೆ. ಹೀಗೆ ಎರಡು ವರ್ಷಗಳು ಇದ್ದ. ಅವನಿಗೆ ಏನೋ ಅವನ ಊರಿಗೆ ಹೋಗಬೇಕು ಈ ಸ್ಥಳವನ್ನು ನಿರ್ಗಮಿಸಬೇಕು ಎಂದು ಅನ್ನಿಸುತ್ತಲೇ ಇರಲಿಲ್ಲ. ಇದ್ದಷ್ಟು ಸಮಯದಲ್ಲಿ ನನಗೆ ಆ ಅವನ ಹುಟ್ಟೂರು ಬಸ್ಸಿನಲ್ಲಿ ಬರುವ ಜನಗಳ ಬದುಕುವ ರೀತಿಯನ್ನು ಕಲಿಸಿದ. ಏನೋ ತಗಡನ್ನು ಎಸೆಯುತ್ತಿದ್ದಾರೆ ಎಂದು ಭಾವಿಸಿದ್ದ ನನಗೆ ಅದೊಂದು ನೀರೆತ್ತುವ ಸಾಧನ,ತಂಬಿಗೆ ಎಂದು ತಿಳಿಸಿಕೊಟ್ಟ. ಆಧುನಿಕತೆ, ಅದರ ಭಾಷೆ ಎಲ್ಲವನ್ನು ಸವಿವರವಾಗಿ ತಿಳಿಸಿದ.
ನಂತರ ಒಂದು ದಿನ ಅವನಿಗೆ ಹುಟ್ಟಿದ ಗಂಡು ಮಗುವಿನೊಂದಿಗೆ ಸ್ವಲ್ಪ ದಿನ ಬರುತ್ತೇನೆ ಎಂದು ಹೇಳಿ ಹೊರಟ.ಮತ್ತೆ ಆತಬರಲೇ ಇಲ್ಲ. "
ಆತ ಮಾಡಿದ ಮೋಸಕ್ಕೋ , ಆ ಕಾಡು ಜನರ ’ಮದುವೆ’ ಎಂಬುದೂ ಗೊತ್ತಿಲ್ಲದ ಮುಗ್ದತೆಯೊಂದಿಗೆ ಆಟವಾಡಿದ್ದರ  ಆತನ ಅತಿಯಾದ ಪ್ರಬುಧ್ದತೆಗೋ ಆತನ ಮೇಲೆ ರೋಷವುಕ್ಕಿ ಬರುತಿತ್ತು.
ಶಶಿಧರ್ ನ ಸಂವೇದನೆಗಳೂ ನನ್ನಂತೆಯೇ ಇದ್ದವೆಂದು ತೋರುತ್ತದೆ. ಆತನ ಕಣ್ಣುಗಳಲ್ಲಿ ಹನಿಯ್ಂದು ಜಿನುಗಿದ್ದನ್ನು ಕಂಡೆ.
ಆತ ಮುಂದುವರೆಸಿದ,
" ಆ ವ್ಯಕ್ತಿಯ ಕೊರಗಿನಲ್ಲಿ ನನ್ನ ಮಗಳು ಒಂಟಿಯಾಗಿ ಬಿಟ್ಟಳು. ಯಾರೊಂದಿಗೂ ಮಾತನಾಡಲಾರಳು.ಅದಕ್ಕೇನು ಪರಿಹಾರವೆಂದು ನನಗೆ ತಿಳಿದಿದೆ.ಆಕೆ ಒಮ್ಮೆ ಆತನ ಮುಖವನ್ನೋ ಅತವಾ ಆತನ ಮಗನನ್ನೋ ನೋಡಿದರೆ ಸರಿಹೋಗಬಹುದು. "
" ಆತನನ್ನೇನ್ನೋ ಬಿಡಿ, ಆತನ ಚಿಕ್ಕ ಮಗು ಈಗ ದೊಡ್ಡವನಾಗಿರಬಹುದು. ಆತನನ್ನು ಗುರುತು ಹಿಡಿಯಬಹುದಾದರೂ ಹೇಗೆ?" ನಾನೊಬ್ಬ ಭಾರಿ ಸಹಾಯ ಹಸ್ತ ನೀಡುವ ಮನುಷ್ಯನಂತೆ ಅನ್ನಿಸಿದ್ದು ಒಳ್ಳೆಯ ಮುದ ನೀಡಿತು.
" ಸುಲಭ ! , ಆತನಿಗೆ ಅವರಪ್ಪನಂತೆಯೇ ಕಾಲುಗಳಲ್ಲಿ ನೆಡೆದಾಗ ನೀಲಿ ಬಣ್ಣದ ಗುರುತೊಂದು ಬೀಳುತಿತ್ತು!! "
ನನ್ನ ಮೈಯಲ್ಲಿ ಸಣ್ಣ ನಡುಕವೊಂದು ಶುರುವಾಯ್ತು. ಆತ ಹೇಳುತ್ತಿರುವ ಮಗು ನಾನೇ ಎಂಬ ಸಂಶಯ ಕಾಡತೊಡಗಿತು. ಮೊದಲ ಬಾರಿಗೆ ನನ್ನ ಜೀವ ಕಾಣದ ’ಅಮ್ಮ’ನಿಗಾಗಿ ಹಾತೊರೆಯ ತೊಡಗಿತು.
ಆತ ನನ್ನನ್ನು ನನ್ನೊಡನೆ ಬಾ ಎಂಬಂತೆ ಸನ್ನೆ ಮಾಡಿದ. ನಾನು ಮೌನವಾಗಿ ಆತನನ್ನು ಹಿಂಬಾಲಿಸತೊಡಗಿದೆ.
ಕಾಲುದಾರಿಗುಂಟ ಎರಡು ಕಿ.ಮೀ ನೆಡೆದಾಗ ಒಂಟಿ ಗುಡಿಸಲೊಂದರ ಇರುವಿಕೆ ಅನುಭವಕ್ಕೆ ಬಂತು.
ಒಳಹೊಕ್ಕೆ, ಮೂಲೆಯಲ್ಲೊಂದು ಹಾಸಿಗೆ ಅದರ ಮೇಲೆ ಹೆಂಗಸೊಬ್ಬಳು ಮಲಗಿದ್ದಳು. ಇದೆಲ್ಲ ನಾನು ಮೊದಲೆ ಎಣಿಸಿದಂತೆಯೇ ಇದ್ದವು. ಆದರೆ ನನಗೆ ಆಶ್ಚರ್ಯ ಉಂಟುಮಾಡಿ ಸ್ತಂಭೀಭೂತಗೊಳಿಸಿದ್ದು ಸುಮಾರು ಮಧ್ಯವಸ್ಕನೊಬ್ಬನ ಹಾಗೂ ಹಸುಗೂಸೊಂದು ತೆವಳಿ ಹೊರಟ ನೀಲಿ ಹೆಜ್ಜೆಗಳು!!! ಆಕೆಯ ಮಗ ನಾನೆ ಎಂಬುದು ನನಗೆ ದೃಡಪಡಿಸಲು ಅಷ್ಟು ಸಾಕಿದ್ದವು. ನಾನು ನಿಧಾನವಾಗಿ ಆಕೆಯನ್ನು ಸಮೀಪಿಸಿದೆ. ಮೆಲ್ಲನೆ ನನ್ನ ಕೈಗಳಿಂದ ಆಕೆಯ ಭುಜವನ್ನೊಮ್ಮೆ ಕದಲಿಸಿದೆ. ಅರ್ಧ ಅರ್ಧವಾಗಿ ತೆರೆದ ಕಣ್ಣುಗಳು ನನ್ನನ್ನು ನೋಡಿದವು. ನನ್ನ ಕಣ್ಣುಗಳೇನೋ ಅಶ್ರುತರ್ಪಣವನ್ನು ಹೊರಹಾಕುತ್ತಿದ್ದವು, ಆದರೆ ಆಕೆ ಒಮ್ಮೆ ಏನೋ ಅರ್ಥವಾಗದ ಭಾಷೆಯೊಂದರಲ್ಲಿ ಹೇಳಿ ಮುಗ್ಗಲು ಬದಲಿಸಿ ಮತ್ತೆ ಮಲಗಿದಳು. ನಾನು ಅತ್ತ ತಿರುಗಿದಾಗ ನನ್ನನ್ನು ಇಲ್ಲಿಗೆ ಕರೆತಂದ ಮುದುಕ ಕಷ್ಟಪಟ್ಟು ಮಾಡಿದ ಕೆಲಸ ನೀರಿನಲ್ಲಿ ಬಿಟ್ಟಂತಾಯಿತಲ್ಲ ಎಂಬ ನಿರ್ವಿಣ್ಣತೆಯಿಂದ ಹೊರನೆಡೆದ. ನಾನು ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತಿದ್ದೆ. ಆಕೆಯನ್ನು ಮತ್ತೆ ಎಬ್ಬಿಸುವ ಮನಸ್ಸಾಗಲಿಲ್ಲ. ನನ್ನ ಗುರುತು ಆಕೆಗೆ ಸಿಗಲಿಲ್ಲವೆಂದೂ ಮತ್ತು ನನ್ನ ನೀಲಿ ಹೆಜ್ಜೆಗಳು ಅದನ್ನು ನೋಡಿ ತನ್ನ ಮರೆತುಹೋದ ಒಡನಾಟ ಜ್ಞಾಪಕ ಪಟ್ಟುಕೊಳ್ಳುವಷ್ಟು ಮಾನಸಿಕ ವ್ಯವಧಾನ ಅವಳಲ್ಲಿ ಇರಲಿಲ್ಲವೆಂದು ನನಗೆ ತಿಳಿದಿತ್ತು. ನಿಧಾನವಾಗಿ ಗುಡಿಸಿಲಿನಿಂದ ಹೊರಬಂದೆ. ಅಷ್ಟರಲ್ಲಿ ಆ ಮುದುಕ ಬಂದು ,
" ದೂರದಲ್ಲೆಲ್ಲೊ ಗಾಡಿಯ ಶಬ್ಧ ಕೇಳುತ್ತಿದೆ. ನೀನಿನ್ನು ಹೊರಡು ಮಗ " ಎಂದ.
ಏನನ್ನಿಸಿತೋ ಕಣ್ಣೀರಿನೊಂದಿಗೆ ಆತನನ್ನೊಮ್ಮೆ ತಬ್ಬಿಕೊಂಡು ಬಸ್ಸುಗಳು ತಲುಪಬಹುದ್ದಾದಂತಹ ಜಾಗಕ್ಕೆ ಬಂದೆ.
ಸ್ವಲ್ಪ ಹೊತ್ತಿನ ನಂತರ ಬಂದ ಬಸ್ಸೊಂದು ನನ್ನನ್ನು ನನ್ನ ಹಳೆಯ ಜೀವನಕ್ಕೆ ಕರೆತರುವಂತೆ ಮಾಡಿತು. ಈಗ ನಾನು ನನ್ನ ಅದೇ ಹಳೆಯ ಜೀವನವನ್ನು ಸಾಗಿಸುತ್ತಿದ್ದೇನೆ.
" ಸರಿ..." ಒಂದು ಬೆರಳಿನಿಂದ ತನ್ನ ಕಣ್ಣೀರಿನ ಹನಿಗೆ ನೆಲದ ದಾರಿ ತೋರಿಸುತ್ತಾ, ಶಶಿಧರ್ ಮುಂದುವರೆಸಿದ,
" ಇದರಲ್ಲಿ ನನ್ನನ್ನು ತಲುಪುವ ಕಾರಣವೇನು? ನೀವೇ ಹೇಳಿದಂತೆ ನಿಮಗೆ ಯಾವ ರೋಗವೂ ಖಾಯಿಲೆಯೂ ಇಲ್ಲವಲ್ಲ..? "
" ನನ್ನದೇನೂ ಇಲ್ಲ. ಆದರೆ ನನ್ನ ಸೋ ಕಾಲ್ಡ್ ಅಮ್ಮನನ್ನು ಮಾನಸಿಕವಾಗಿಯೋ ಅಥವಾ ಮಾಂತ್ರಿಕವಾಗಿಯೋ ಗುಣಪಡಿಸಬೇಕೆಂಬ ಹಂಬಲ ನನಗುಂಟಾಗಿದೆ. ನೀವೊಬ್ಬರೇ ನನಗೆ ಸಹಾಯಮಾಡಬಲ್ಲಿರಿ ದಯವಿಟ್ಟು ಹೆಲ್ಫ್ ಮಾಡಿ ದಯವಿಟ್ಟು. "
" ಸರಿ ಯೋಚನೆ ಮಾಡುತ್ತೇನೆ. ನಾನು ನನ್ನ ಎಲ್ಲ ಪ್ರತಿಫಲಿಗಳಿಗೂ ಅವರ ಉತ್ತರವನ್ನು ಪತ್ರ-ಮುಖೇನವೇ ಉತ್ತರಿಸುತ್ತೇನೆ. ನಿನ್ನ ವಿಳಾಸವನ್ನು ಅದೋ ಅಲ್ಲಿರುವ ಕಾಗದದಲ್ಲಿ ಬರೆದು ಹೋಗು. ಎರಡು ದಿನದ ನಂತರ ನನ್ನ ಉತ್ತರ ನಿನಗೆ ತಲುಪುತ್ತದೆ. " ಅಲ್ಲಿದ್ದ ಕಾಗದವೊಂದನ್ನು ತೋರಿಸಿ ಹೇಳಿದರು.
ನಾನು ಆತ ಹೇಳಿದಂತೆಯೇ ಮಾಡಿ ಹೊರಬಂದೆ.

ಎರಡು ದಿನಗಳ ನಂತರ ನನಗೆ ಅವರ ಪತ್ರ ಬಂದಿತು. ಕೇವಲ ಎರಡು-ಮೂರು ಸಂದೇಶಗಳು,
’ ನಾನು ನಿನ್ನ ತಾಯಿಯ ತೊಂದರೆಯನ್ನು ಪರಿಹರಿಸಲು ಒಪ್ಪಿದ್ದೇನೆ. ನಾನು ಕಂಡಿತ ಆಕೆಯ ಜ್ಞಾನವನ್ನು ಮತ್ತೆ ಮಾಮೂಲಿಯಂತೆ ಮಾಡುತ್ತೇನೆ ಎಂಬ ನಂಬಿಕೆ ನನಗಿದೆ, ನಾನು ಇದನ್ನೆಲ್ಲ ಮಾಡುವಾಗ ನೀನು ಕೇವಲ ಒಂದು ಕೆಲಸ ಮಾಡು ಇವತ್ತು ನನ್ನ ಮನೆಗೆ ಹೋಗು. ಎಡ ಭಾಗದಿಂದ ಮೂರನೇ ಗಿಡದ ಹೂಜಿಯ ಕೆಳಗೆ ಕೀಲಿ ಕೈ ಇದೆ. ಮನೆಯ ಒಳಗೆ ನಾವು ಅಂದು ಮೊದಲು ಭೇಟಿಯಾದ ಸ್ಥಳದ ಎಡಭಾಗದಲ್ಲಿರುವ ಕೋಣೆಗೆ ಹೋಗು... ಮೊದಲು ಅಲ್ಲಿನ ಪತ್ರ ಓದು ನಂತರ ಅಲ್ಲಿನ ಸ್ಕ್ರೀನ್ ತೆಗಿ... ದಯವಿಟ್ಟು ನಾನು ಹೇಳಿದ ಕೆಲಸಗಳನ್ನು ಹೇಳಿದ ಕ್ರಮದಲ್ಲಿಯೇ ಮಾಡು. ’
ನಾನು ಆತ ಆ ಸ್ಥಳವನ್ನು , ನನ್ನ ಅಮ್ಮನನ್ನು ಹೇಗೆ ಕಂಡು ಹಿಡಿಯುತ್ತಾರೋ ಎಂಬ ಸಂದೇಹವನ್ನೇ ಇಟ್ಟುಕೊಂಡಿರಲಿಲ್ಲ ಆತನ ಅತಿಮಾನುಶ ಶಕ್ತಿಗಳು ನನ್ನಲ್ಲಿ ಅದರ ಬಗ್ಗೆ ಯಾವುದೇ ಸಂದೇಹವನ್ನೂ ಉಳಿಸಿರಲಿಲ್ಲ.
ನಾನು ಆತ ಹೇಳಿದಂತೆ ಅವನ ಮನೆಗೆಹೋದೆ. ನಾನು ಆ ನಂತರ ಆತ ಹೇಳಿದಂತೆ ಆ ರೂಮಿಗೆ ಹೋದೆ ಅಲ್ಲಿ ಒಂದು ಪತ್ರ ಗಾಳಿಗೆ ಕುಣಿಯುತ್ತಿತ್ತು. ಓದಲು ತೊಡಗಿದೆ.
’ ನಿನ್ನ ತಂದೆಯ ಮುಖಕ್ಕೆ ನಿಜವಾಗಿಯೂ ಏನೂ ಆಗಿರಲಿಲ್ಲ. ಆತ ಕೇವಲ ಆಸಿಡ್ ಬಿದ್ದಂತಿರುವ ಒಂದು ಮುಖವಾಡವನ್ನು ಧರಿಸುತ್ತಿದ್ದ!!. ಆದ್ದರಿಂದ ಅವನ ಮೈಯೆಲ್ಲಾ ಅದೇ ರೀತಿಯಾಗಿದೆ ಎಂದು ನೀನು ಚಿಂತೆಪಡುವುದು ಬೇಕಿಲ್ಲ. ಏಕೆಂದು ನೀನು ನಾನು ಹೇಳಿದ ಮುಂದಿನ ಕೆಲಸ ಮಾಡಿದಾಗ ನಿನಗೇ ತಿಳಿಯುತ್ತದೆ. ’
ನನ್ನ ಹೃದಯ ಬಡಿತ ನನಗೇ ಕೇಳುವುದರಲ್ಲಿ ಬೇರೇ ಅನುಮಾನವೇ ಇರಲಿಲ್ಲ.
ನನ್ನ ಕಾಲುಗಳು ಅಲ್ಲಿದ್ದ ಬಟ್ಟೆಯೆಡೆಗೆ ಚಲಿಸತೊಡಗಿದವು... ನನ್ನ ಕೈಗಳು ಅದನ್ನು ಸರಿಸತೊಡಗಿದವು.
ನನ್ನ ತಂದೆ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ಹೇಗೆ ಸಾಧ್ಯ? ಆತ ತನ್ನ ಮಗನನ್ನು ಆ ಅಪೂರ್ವ ಜನಾಂಗವೊಂದರ ನೆರಳಲ್ಲಿ ಬದುಕದಿರಲಿ ಎಂಬ ಉದ್ದೇಶ...
ಕೊನೆಗೆ ನನ್ನ ಕಾಲಿಗೆ ಇಷ್ಟು ವರ್ಷ ಏಕೆ ಪ್ಲಾಸ್ಟಿಕ್ ನ ಕವಚವೊಂದು ಮುತ್ತಿಕೊಂಡಿತ್ತು? ಎಂಬುದಕ್ಕೆ ಉತ್ತರ ಸಿಕ್ಕಿತ್ತು.
" ನಾನು ಆತ ಆ ಸ್ಥಳವನ್ನು , ನನ್ನ ಅಮ್ಮನನ್ನು ಹೇಗೆ ಕಂಡು ಹಿಡಿಯುತ್ತಾರೋ ಎಂಬ ಸಂದೇಹವನ್ನೇ ಇಟ್ಟುಕೊಂಡಿರಲಿಲ್ಲ " , " ಕಂಡಿತ ಆಕೆಯ ಜ್ಞಾನವನ್ನು ಮತ್ತೆ ಮಾಮೂಲಿಯಂತೆ ಮಾಡುತ್ತೇನೆ " ಎಂಬ ವಾಕ್ಯಗಳಿಗೆ ಪುಷ್ಠಿ ಸಿಕ್ಕಿತ್ತು.
ಬಟ್ಟೆಯ ಪರಿಧಿಯ ಆಚೆಗೆ ನೆಲದ ಮೇಲೆ ’ ಶಶಿಧರ್/ನಿನ್ನ ____ ’ ಎಂಬ ಬಾಣದ ಗುರುತುಳ್ಳ ನೀಲಿ ಹೆಜ್ಜೆಗಳು ಫಳಫಳನೆ ಮಿನುಗುತ್ತಾ ಹೊಳೆಯುತ್ತಿದವು!!!!!!
*******
ಈ ಕತೆಯನ್ನು ಓದುವತನಕ ನನಗೇನೂ ಅಂತಹವಿಚಿತ್ರ ಎನಿಸಿರಲಿಲ್ಲ.ಮಾಮೂಲಿ ಊಹೆಯ ಜಾಲದ ಕತೆ ಎಂದುಕೊಳ್ಳುತಿದ್ದೆ ಆದರೆ ನನಗೆ ಈ ಕತೆ ಸಿಕ್ಕ ಸ್ಥಳ,ಅದು ನನ್ನನ್ನು ತುಂಬಾ ಯೋಚನೆಗೀಡು ಮಾಡಿತ್ತು.ಅದು ನನ್ನ ಎರಡು ದಿನಗಳ ಹಿಂದೆ ದೈವಾದೀನರಾದ ನನ್ನ ತಂದೆಯ ಡೈರಿ. ಅಪ್ಪನಿಗೆ ಸತ್ಯ ಕತೆಗಳನ್ನು ಬರೆಯುವ ಹವ್ಯಾಸವಿತ್ತು.ಎಲ್ಲ ಕತೆಗಳನ್ನೂ ಪ್ರಕಟಿಸಿದ್ದರೂ ಇದನ್ನು ಪ್ರಕಟಿಸಿರಲಿಲ್ಲ.ನಾನು ಇದನ್ನು ಯಾಕೆ ಪ್ರಕಟಿಸದ ಒಂದೇ ಒಂದು ಕತೆ ಇವರಬಳಿ ಇಟ್ಟುಕೊಂಡಿದ್ದಾರೆಂದು ಕುತೂಹಲದಿಂದ ಓದಿದ್ದೆ.
ಆದರೆ ಈಗ,ನನಗೆ ಬೆವರಿನ ಪ್ರಕಟಣೆಯ ಘೋಷಣೆ ಕೇಳಿಸುತಿತ್ತು.
ನನ್ನ ಕಾಲುಗಳಿಗೆ ಇಪ್ಪತ್ತು ವರ್ಷದಿಂದ ಪ್ಲಾಸ್ಟಿಕ್ ನ ಹೊರಕವಚವೊಂದನ್ನು ಹಾಕಲಾಗಿತ್ತು!!!!!!
~~~~~~
ಟಿಪ್ಪಣಿ:- ಇದೊಂದು ಸೈ-ಫ಼ೈ ಅಥವಾ ಫಿಕ್ಷನ್ ಕತೆಯಲ್ಲ.ಒಮ್ಮೆ ಇದನ್ನು ಮೊದಲಿನಿಂದ ಓದಿ...ಈ ಬಾರಿ ನೀಲಿ ಹೆಜ್ಜೆಗಳನ್ನು ನೀಲಿಗಟ್ಟಿದ ಹಳೆಯ ಕರಾಳ ನೆನೆಪುಗಳು

ಎಂದು ಮನನಮಾಡುತ್ತಾ....

Part-2

" ಅದಕ್ಕೇ ನನ್ನನ್ನು ವೈದ್ಯನೆನ್ನುತ್ತಾರೆ " ಎಂದು ಸಣ್ಣನೆ ನಕ್ಕರು ಶಶಿಧರ್ . ಆತನನ್ನು ಬಹುವಚನದಲ್ಲಿ ಕರೆಯುವುದು ಒಳಿತೆನಿಸಿತು...ಆತನ ವಯಸ್ಸಿಗೂ ಆತನ ಬುದ್ದಿವಂತಿಕೆಗೂ...
" ಆ ಸಂತೋಶ ನನಗೆ ನಾನೊಬ್ಬ ಪವಾಡಪುರುಷನೇನೋ ಎಂಬಂತೆ ನನಗೆ ನಂಬಿಕೆ ಬರುವಂತೆ ಮಾಡಿತು.ನಾನು ಎಲ್ಲೆಲ್ಲಿ ಹೋಗುವೆನೋ ಅಲ್ಲೆಲ್ಲ ನಾನು ಬರಿಗಾಲಿನಲ್ಲಿದ್ದರೆ ನನ್ನ ಪಾದದ ಹೆಜ್ಜೆ ಗುರುತು ಮೂಡುತಿತ್ತು.ನನ್ನ ಕಾಲಿನ ನೀಲಿಗಟ್ಟುವಿಕೆ ಪೂರ್ಣವಾಗಿ ಮುಕ್ತವಾದರೂ ಆ ಹೆಜ್ಜೆಗಳು ಮೂಡುತ್ತಲೇ ಇದ್ದವು.ದಿನೇ ದಿನೇ ನಾನು ಕಂಡುಕೊಂಡ ಸಂಗತಿಯೇನೆಂದರೆ ಈ ಹೆಜ್ಜೆ ಗುರುತುಗಳು ನನಗೊಬ್ಬನಿಗೇ ಕಾಣುತಿದ್ದವು.ಬೇರೆ ಯಾರೂ ಅದನ್ನು ಗುರುತಿಸಲು ಸಾಧ್ಯವಿರಲಿಲ್ಲ.ಇದು ನನ್ನಲ್ಲಿ ಕೇವಲ ಹಾಲಿವುಡ್ ಚಲನಚಿತ್ರಗಳಲ್ಲಿ ಕಂಡಿದ್ದ ಸೂಪರ್ ಮ್ಯಾನ್-ಸ್ಪೈಡರ್ ಮ್ಯಾನ್ ಗಳು ಹೇಗೆ ತಮ್ಮ ನಿಜರೂಪವನ್ನು ಮರೆಮಾಚುತಿದ್ದರೋ ಹಾಗೆ ನಾನು ಒಬ್ಬ ಆದರೆ ನಿಜ ಜೀವನದ ಹೀರೋ ಅನ್ನಿಸತೊಡಗಿತ್ತು, ನಮ್ಮ ಆಫೀಸ್ ನಿಂದ ಪೂರ್ಣ ಭಾರತ ಪ್ರವಾಸಕ್ಕೆ ಹೋಗುವವರೆಗೂ... "
" ಅಯ್ಯೋ! ಅಂತಹ ತಪ್ಪನ್ನೂ ಮಾಡಿ ಬಿಟ್ಟೆಯಾ ? "
" ಯಾಕೆ? "
" ಏಕೆಂದು ನಿನಗೆ ತಿಳಿದಿಲ್ಲವೇ? " ಆತನ ತುಟಿಗಳಲ್ಲಿ ನಸುನಗು ಮಾಯವಾಗಿ ಗಾಬರಿ ಮನೆಮಾಡಿತು.
" ಅದೂ ಸರಿ ಎನ್ನಿ.... ನಾವು ಎಲ್ಲರಂತೆ ದೇವಸ್ಥಾನಗಳಿಗೋ ಪ್ರೇಕ್ಷಣೀಯ ಸ್ಥಳಗಳಿಗೋ ಹೋಗಲಿಲ್ಲ, ಬದಲಾಗಿ ಐತಿಹಾಸಿಕ ಸ್ಥಳಗಳಿಗೆ ಹೋದೆವು. ಹಂಪಿ,ಜಲಿಯನ್ ವಾಲಾಬಾಗ್,ದೆಹಲಿಯ ಕೋಟೆಕೊತ್ತಲುಗಳು ಇತ್ಯಾದಿ ಸ್ಥಳಗಳಿಗೆ ಹೋದಾಗ ಏನೂ ತೊಂದರೆ ಇರಲಿಲ್ಲ, ಆದರೆ ನಿಜವಾದ ತೊಂದರೆ ಶುರುವಾದದ್ದೇ ನಮ್ಮ ಪ್ರವಾಸದ ಕೊನೆಯ ಸ್ಥಳವಾದ ಅಂಡಮಾನ್ ಸೆಲ್ಲ್ಯುಲಾರ್ ಜೈಲ್ ನಲ್ಲಿ..! "
ಏಕೋ ಶಶಿಧರ್ ಮುಖದಲ್ಲಿ ಅಂಡಮಾನ್ ಹೆಸರೆತ್ತುತ್ತಿದ್ದಂತೆ ಬೆವರಹನಿಗಳು ಮೂಡುತಿದ್ದವು.ಆ ಬೆವರು ನನಗೆ ಇತ್ತೀಚೆಗೆ ಚಿರಪರಿಚಿತ ಏಕೆಂದರೆ ಅಂಡಮಾನ್ ನಲ್ಲಿ ಅದು ನನಗೂ ಪ್ರಕಟಗೊಂಡಿತ್ತು.ಆದರೂ ಆತನಿಗೆ ನನ್ನ ಕತೆಯೆಲ್ಲ ಮೊದಲೇ ತಿಳಿದಿರುವುದೇನೋ ಎಂದು ಅನ್ನಿಸಿದ್ದು ಸಂಪೂರ್ಣ ನಾಸ್ತಿಕನಾದ ನನಗೂ ಅದರಲ್ಲೂ ಇತ್ತೀಚಿನ ಘಟನೆಗಳಿಂದ ಪ್ರಭಾವಿತನಾಗಿದ್ದರಿಂದ ಆಸ್ತಿಕತೆಯನ್ನು ನಂಬಲೇ ಬೇಕೆಂದು ಒತ್ತಾಯಗೊಳಿಸಿತಿತ್ತು.ನಾನು ನನ್ನ ಮಾತುಗಳನ್ನು ನಿಡಿದಾದ ಒಂದು ನಿಟ್ಟುಸಿರಿನೊಂದಿಗೆ ಮತ್ತೆ ಶುರುಮಾಡಿದೆ.
" ಸೆಲ್ಲ್ಯುಲಾರ್ ಜೈಲ್ ಒಂದು ಮ್ಯೂಸಿಯಂ ಮಾತ್ರವಲ್ಲ , ಅದು ರಕ್ತಸಿಕ್ತ ಇತಿಹಾಸ ಮೈವೆದ್ದು ಬಂದಂತೆ ಅನಿಸುವ ವಿಚಿತ್ರ ಸ್ಥಳ. ವೀರ್ ಸಾವರ್ಕರ್ ಅಲ್ಲಿದ್ದರೆಂಬುದು ಪುಸ್ತಕಗಳಲ್ಲಿ ಮಾತ್ರ ಕಂಡುಬರುವ ಸತ್ಯಗಳು ಆದರೆ ಅಲ್ಲಿನ ನಿಜವಾದ ರೂಪ ಎಷ್ಟು ಭಯಾನಕವೆಂದರೆ ತೇಜಸ್ವಿಯವರ ’ ಪ್ಯಾಪಿಲಾನ್ ’ ತಕ್ಷಣ ಜ್ನಾಪಕಕ್ಕೆ ಬರುತ್ತದೆ. "
" ಗೊತ್ತಿದೆ ಬಿಡಿ. ಸ್ವಪ್ನದಲ್ಲಿಯೂ ಅಲ್ಲಿರುವ ಬಗ್ಗೆ ನೆನೆಯಲು ಭಯವಾಗುತ್ತದೆ. "
" ನೀವೂ ಅಲ್ಲಿಗೆ ಭೇಟಿ ಕೊಟ್ಟಿದ್ದೀರಾ ? "
" ಹಣೆಬರಹ ಅಲ್ಲಿಗೇ ಹೋಗಬೇಕಾಗಿ ಬರೆದಿತ್ತು.ಮುಂದೆ ಹೇಳಿ "
ಆತ ಸ್ವಲ್ಪಗೊಂದಲಮಯವಾಗಿ ಮಾತನಾಡುತಿದ್ದ. ಆದರೆ ಆತನ ಜೀವನದಲ್ಲಿ ವಿಚಿತ್ರವಿದೆ ಎನ್ನುವುದು ನನಗೆ ತಿಳಿಯುತಿತ್ತು. ಈತ ನಿಜವಾಗಿ ಮನೋವೈದ್ಯನಾಗಿ ಮಂತ್ರ-ತಂತ್ರ ಕಲಿತಿದ್ದಾನೋ , ಮಂತ್ರ-ತಂತ್ರದೊಳಗೆ ಪರಿಣಿತನಾಗಿ ನಂತರ ಮನೋವೈದ್ಯನಂಬ ಹಣೆಪಟ್ಟಿಯಲ್ಲಿ ನಟಿಸುತಿದ್ದಾನೋ ತಿಳಿಯದಾಯಿತು.
" ನಾವು ಸೆಲ್ಲ್ಯುಲಾರ್ ಜೈಲ್ ನಿಂದ ವಾಪಸ್ಸುಬರಲು ತೆರಳಿದಾಗ ರಾತ್ರಿ ತುಂಬಾ ಕತ್ತಲಿತ್ತು.ನಾವು ರಾಷ್ಟ್ರೀಯ ಹೆದ್ದಾರಿ ೨೨೩ ಮೂಲಕ ಫೆರಾಗಂಗ್ ದಾಟಿ ಪೋರ್ಟ್ ಬ್ಲೇರ್ ಗೆ ಹೋಗಬೇಕಿತ್ತು. ನಾವು ಬಂದಿದ್ದ ಟೂರಿಸ್ಟ್ ವಾಹನ ಆಗಲೇ ಉಳಿದ ಪ್ರಯಾಣಿಕರೊಡನೆ ನಿರ್ಗಮಿಸಿತ್ತು. ನಾವು ಐವರಿದ್ದೆವು,ಆಟೋ-ಗೀಟೋ ಆಗಿಬರುತ್ತಿರಲಿಲ್ಲ ನಮ್ಮವರಿಗೆ.ಕಾರು ಅನಿವಾರ್ಯವಾಯ್ತು. ಅಕ್ಕ ಪಕ್ಕದವರನ್ನು ಕೇಳಿದಾಗ ಅವರು ಇಲ್ಲಿಂದ ಈ ದಿಕ್ಕಿಗೆ ಎರಡು ಕಿ.ಮೀ ನೆಡೆದರೆ ಟ್ಯಾಕ್ಸಿ ಸ್ಟ್ಯಾಂಡ್ ದೊರಕುತ್ತದೆ , ಅಲ್ಲಿಗೆ ಹೋಗಿ ಎಂದ.ನಾವು ಐದೂಜನ ಹೋಗುವುದು ಸಮಂಜಸವೆನಿಸಲಿಲ್ಲ.ಸರಿ ನಮ್ಮಲ್ಲಿ ಇದ್ದ ಬಿಯರ್ ಬಾಟಲಿಯನ್ನು ತೆಗೆದು ನೆಲದಮೇಲೆ ತಿರುಗಿಸೋಣ ಯಾರಕಡೆಗೆ ನಿಲ್ಲುತ್ತದೋ ಅವರು ಹೋಗಲಿ ಎಂದರು.ನಮ್ಮ ಆಫೀಸಿನಲ್ಲಿ ಇಂತಹ ಆಟಗಳು ಸಾಮಾನ್ಯ,ಎಷ್ಟೆಂದರೂ ಬೆಂಗಳೂರಿನ ಕುಡಿಗಳಲ್ಲವೇ, ಪಾಶ್ಚಾತ್ಯ ಚಟುವಟಿಕೆಗಳು ತುಂಬಾ ಸುಲಭವಾಗಿ ನಮ್ಮಲ್ಲಿ ಹರಡುತ್ತವೆ. ಕತೆ-ಸಿನಿಮಾಗಳಲ್ಲಿ ಮಾತ್ರ ಈ ತರಹ ಪ್ರಶ್ನೆ ಬಂದಾಗ ಮುಖ್ಯಪಾತ್ರವೊಂದೇ ಸಿಕ್ಕಿಹಾಕಿಕೊಳ್ಳುತ್ತದೆ ಎಂದುಕೊಂಡಿದ್ದೆ ಆದರೆ ಅದು ಹುಸಿಯಾಯಿತು!!. ಬಾಟಲಿ ತನ್ನ ತಿರುಗಾಟನಿಲ್ಲಿಸಿ ತನ್ನ ಮುಖವನ್ನು ’ ಬಲಿಕೊಡುವ ಸಮಯ ಬಂದಾಯ್ತು’ ಎಂಬಂತೆ ನನ್ನನ್ನು ಗುರಿಮಾಡಿ ನಿಂತಿತು!. ಮಿಕ್ಕ ನಾಲ್ವರು ನಕ್ಕು ಕೇಕೆ ಹಾಕುತ್ತಾ ನನ್ನನ್ನು ಕಳುಹಿಸಿಕೊಟ್ಟರು.ಎರಡು ಕಿ.ಮೀ ದೂರಕ್ಕೆ ಇಷ್ಟೊಂದು ತರಲೆ ಬೇಕಾ? ಎಂದು ಅನ್ನಿಸದೆ ಇರಲಿಲ್ಲ.
 ನಾನು ಸುಮಾರು ಒಂದೂವರೆ ಕಿ.ಮೀ. ದೂರಬಂದಮೇಲೆ ನನ್ನನ್ನು ಯಾರೋ ಹಿಂಬಾಲಿಸುವಂತೆ ಭಾಸವಾಯಿತು.ಹಿಂದೆ ತಿರುಗಿ ನೋಡಿದಾಗ ಯಾರ ಸುಳಿವೂ ಇಲ್ಲ.ಮತ್ತಷ್ಟು ದೂರ ಹೋದಾಗ ತರಗಲೆಗಳ ಶಬ್ದ ಕೇಳಿತು!. ಭಯ ಹೆಚ್ಚಾಯಿತು.ನನ್ನ ಕೈಯಲ್ಲಿನ ಬ್ಯಾಟರೀ ಚಾಲಿತ ದೀಪವೊಂದನ್ನು ಬಿಟ್ಟರೆ ಯಾವ ಬೆಳಕೂ ಕಾಣಲೊಲ್ಲದು.ಹಿಂದಿರುಗಿ ಸದ್ದಾದಲ್ಲಿ ಟಾರ್ಚ್ ಬಿಟ್ಟು ನೋಡಿದೆ ಮತ್ತೆ ಯಾರ ಸುಲಿವೂ ಇಲ್ಲ,ಆದರೆ ಈ ಬಾರಿ ಹಿಂದಿನ ಶಬ್ದಕ್ಕೆ ಹೆಚ್ಚು ಒತ್ತು ಕೊಟ್ಟದ್ದಕ್ಕೆ ಮುಂದೆ ನೋಡದೆ ಕಾಲಿಟ್ಟೆ ಆಗ ಆಯಿತು ಅರಿವು ನನ್ನ ಕಾಲು ಸಣ್ಣ ಗುಂಡಿಯೊಳಕ್ಕೆ ಕಾಲಿಟ್ಟದ್ದರಿಂದ ಆಯತಪ್ಪಿತು, ಚಪ್ಪಲಿ  ಕಿತ್ತು ಬಂದಿತು. ಮುಂದೆ ನಡೆಯಲಾರದಷ್ಟು ಕೆಟ್ಟಿತು.ನಾನು ಆ ಚಪ್ಪಲಿಯನ್ನು ಹಾಕಿಕೊಂಡು ನಾಲ್ಕುಹೆಜ್ಜೆ ಇಡಲೂ ಹತ್ತು ಹೆಜ್ಜೆ ಇಡಲು ತೆಗೆದುಕೊಂಡಷ್ಟು ಸಮಯ ತೆಗೆದುಕೊಳ್ಳುತಿತ್ತು.ನನ್ನ ವಿಪರ್ಯಾಸಕ್ಕೆ ನಾನೇ ಹಳಿದುಕೊಳ್ಳುತ್ತಾ ಎರಡೂ ಚಪ್ಪಲಿಗಳನ್ನು ಕೈಯಲ್ಲಿ ಹಿಡಿದು ಹೊರಟೆ.ಸ್ವಲ್ಪ ದೂರ ನಡೆಯುತ್ತಲೇ ನನ್ನ ಹಿಂದೆ ಮಿಂಚುಹುಳುಗಳ ಜಾತ್ರೆಯೊಂದು ಒಟ್ಟದಂತೆ ಬೆಳಕಿನ ಮಹಾಪೂರವೇ ಹರಡಿತು.ಅರರೆ ಇದು ಸೀದಾ ಸಾದಾ ಬೆಳಕಲ್ಲ ನೀಲಿ ಬಣ್ಣದಲ್ಲಿದೆ ! ಹಿಂದಿರುಗಿ ನೋಡಿದಾಗ ನನ್ನ ಹೆಜ್ಜೆಗಳು ರಾತ್ರಿಹೊತ್ತು ಮದುವೆಯ ಸಂಭ್ರಮಹೊಂದಿದ ಮನೆಯೊಂದು ಹೇಗೆ ದೀಪಾಲಂಕ್ರತಗೊಂಡಾಗ ಅದ್ಭುತವಾಗಿ ಕಾಣುವುದೋ ಹಾಗೆ ಗೋಚರವಾಯಿತು.ಸುತ್ತಲಿನ ಕತ್ತಲೆಯನ್ನು ಚೆಂಡಾಡಿ ರಣಕೇಕೆ ಹಾಕಿದಂತೆ ನೀಲಿ ಬಣ್ಣ ಏಕಚಕ್ರಾದಿಪತ್ಯ ನಡೆಸಿತ್ತು.ನನ್ನ ಟಾರ್ಚು ನಿಜವಾಗಿಯೂ ತನ್ನ ಕೆಲಸ ನಿರ್ವಹಿಸುತ್ತಿದೆಯೇ ಎಂಬ ಸಂದೇಹ ಬರುವಷ್ಟು ಕಣ್ಣು ಕುಕ್ಕುವ ಬೆಳಕು.ನಾನು ಅತ್ಯಂತ ಆನಂದಿತನಾದೆ,ಅದೇ ನಾನು ಮಾಡಿದ ತಪ್ಪು ಶಶಿಧರ್ ರವರೆ ,ನಾನು ನಿಜವಾಗಿ ಮೈಮರೆತಿದ್ದರಿಂದ ಹಿಂದೆಯೇ ನೋಡುತ್ತಾ ಇದ್ದು ಬಿಟ್ಟೆ ಸರಕ್ಕನೆ ಎನೋ ನನ್ನ ಕುತ್ತಿಗೆಯಲ್ಲಿ ನಾಟಿಕೊಂಡಿತು.ನೋವು ಅರಿವಾಗುತಿತ್ತು,ಕಣ್ಣು ಮಂಜಾಗುತಿತ್ತು,ಸಂಪೂರ್ಣವಾಗಿ ಎನಾಯಿತೋ ತಿಳಿಯದಾಯಿತು. "
ಇಷ್ಟು ಹೊತ್ತು ವಿಚಿತ್ರವಾಗಿ ನನ್ನನ್ನು ನೋಡುತಿದ್ದ ಶಶಿಧರ್ ಸಣ್ಣನೆ ಮುಗುಳ್ನಕ್ಕ.
" ಏಕೆ ನಗುತಿದ್ದೀರಿ?! " ನನ್ನ ದನಿ ಸ್ವಲ್ಪ ಜೋರಾಗಿಯೇ ಇತ್ತು.
" ಏಕಿಲ್ಲ ಬಿಡಿ.ಮತ್ತೆ ಮರುಕಳಿಕೆ ಎನ್ನುವುದು ಸಿನಿಮೀಯವಲ್ಲ. "
" ಸರಿಯಾಗಿ ಹೇಳಿ... "
" ನಾಗರೀಕತೆ ಅರಿಯದ ಜನ ಯಾವಾಗಲೂ ಒಂದೇ ಕೆಲಸವನ್ನು ಮಾಡುತ್ತಾರೆ ಅಲ್ಲವೇ? "
" ಹೌದು!! " ಈಗ ಮತ್ತೊಮ್ಮೆ ಬೆಚ್ಚಿ ಬೀಳುವ ಸರದಿ ನನ್ನದಾಗಿತ್ತು.ಏಕೆಂದರ ನನ್ನ ಮುಂದಿನ  ಕತೆ ಅದರ ಬಗ್ಗೆಯೇ ಸುತ್ತಲಿತ್ತು. ನಾನೇ ಮುಂದುವರೆಸಿದೆ,
" ನಾನು ಕಣ್ಣು ಬಿಟ್ಟಾಗ ಗುಡಿಸಲೊಂದರ ಒಳಗಿದ್ದೆ.ನನ್ನ ಬಟ್ಟೆಗಳು ನನ್ನ ಮೈಮೇಲಿನಿಂದ ಪಲಾಯನಗೈದಿದ್ದವು.ನನ್ನ ಗುಡಿಸಲೊಳಗೆ ಬೇರೆ ಯಾರೂ ಇರಲಿಲ್ಲ.ನಾನು ತುಂಬಾ ನಿಶ್ಯಕ್ತನಾಗಿದ್ದೆನಾದ್ದರಿಂದ ಏಳುವ ಪ್ರಯತ್ನ ಮಾಡಲಿಲ್ಲ ಕಣ್ಣು ತನಗಾದ ಅತ್ಯಂತ ಸುಸ್ತಿನಿಂದ ಮತ್ತೆ ಮುಚ್ಚಿಕೊಳ್ಳಲು ಹಾತೊರೆಯುತ್ತಿದ್ದವು,ನಾನು ಕಣ್ಣು ಮುಚ್ಚುವ ಮುನ್ನ ಕಂಡ ಒಂದು ಸಂಗತಿ ನನ್ನ ತೊಡೆಗಳು ತೆಂಗಿನ ಗರಿಗಳಿಂದ ಮುಚ್ಚಿದ್ದವು..!!! "
" ಜರವಾ...!! "...

To be continued in Post 3................ 

Monday, 3 November 2014

Please comment that how is the story........


Part -1


ವಿ.ಸೂ:- ಈ ಕತೆಯಲ್ಲಿ ಪ್ರಸ್ತಾಪಿಸಿರುವ ಯಾವುದೇ ಪಂಗಡ, ಸಮುದಾಯ, ವ್ಯಕ್ತಿಗಳು, ಪಾತ್ರಗಳು ಇತ್ಯಾದಿ ಹೆಸರಿಸದ ಎಲ್ಲ ವಸ್ತುಗಳೂ ಕೇವಲ ನನ್ನ ಕಲ್ಪನೆ ಮತ್ತು ಲೋಕೋಪಯೋಗಿ ಸತ್ಯದ ಮಿಶ್ರಣ.ಇದರಲ್ಲಿ ಯಾವುದೇ ಸಮುದಾಯ,ಪಂಗಡ,ಪಾತ್ರ ಇತ್ಯಾದಿಗಳಿಗೆ ಅವಮಾನಿಸುವ ಇಲ್ಲವೇ ತಪ್ಪು ಮಾಹಿತಿ ನಿಡುವ ಉದ್ದೇಶ ಇರುವುದಿಲ್ಲ.ಇಲ್ಲಿ ಬರೆದಿರುವುದು ನನ್ನ ಸ್ವಂತ ಕ್ರಿಯಾಶೀಲತೆಯಾಗಿದ್ದು ಇಲ್ಲಿ ಯಾವುದೇ ಕ್ರತಿಚೌರ್ಯದ ಸಂಭವ ಇಲ್ಲ. ಹಾಗೇನಾದರೂ ಮೇಲೆ ಬರೆದ ವಿಷಯಗಳಲ್ಲಿ ಯಾವುದಾದರೂ ಉಲ್ಲಂಗನೆಯಾಗಿದ್ದಲ್ಲಿ ಅದು ಕೇವಲ ಕಾಕತಾಳೀಯವಾಗಿದ್ದು ಅದಕ್ಕೆ ನಾನು ಜವಾಬ್ದಾರನಲ್ಲ.


ಹೆಜ್ಜೆ ಮೂಡಿದ ಹಾದಿ...

ತುಂಬಾ ಯೋಚಿಸಿದೆ...ಆದರೂ ಸಿಗಲಿಲ್ಲ.
ತ್ರೀ ಈಡಿಯಟ್ಸ್ ಸಿನಿಮಾದ ಪ್ರಯೋಗಗಳನ್ನು ಹೊಗಳಿಕೆಗಾಗಿ ಎಲ್ಲರ ಮುಂದೆ ನೆಡೆಸಿ ಫ್ಲಾಪ್ ಆದಾಗ  ಸ್ಕೂಲ್ ನಲ್ಲಿ ಟೀಚರ್ ಗಳ ಮುಂದೆ , ಇಂಜಿನಿಯರಿಂಗ್ ಹಿಂದೆ ಹೋಗಿ ಮೊದಲ ವರ್ಷ ಕುಳಿತು ಆ ನಂತರ ಬಿಜಿನೆಸ್ ನಲ್ಲಿದ್ದ  ನನಗೆ ಅತೀವವಾದ ಆಸಕ್ತಿಯಿಂದ  ಬಿ.ಬಿ.ಎಂ ಮಾಡುವ ಪ್ರಸಂಗ ಬಂದಾಗ ಹೀಗೆ ಒಂದು ವರ್ಷದ ಮಟ್ಟಿಗೆ ಖರ್ಚಾದ ಸುಮಾರು ೨ ಲಕ್ಷ  ರುಪಾಯಿಗಳನ್ನು ನೀರಿಗೆ ಹೋಮಮಾಡಲು ತಯಾರಾಗಿ ಎಂಬ ಪರೋಕ್ಷ ಮನವಿಯೊಂದನ್ನು ತಂದೆಯ ಮುಂದೆ ಹೇಳಲು ಹೊರಟಾಗ ಅವರ ಮುಂದೆ ... ಹೀಗೆ ಜೀವನದಲ್ಲಿ ಕೆಲವೇ ಕೆಲವು ಬಾರಿ ಒಬ್ಬ ವ್ಯಕ್ತಿಗಳ ಮುಂದೆ ಸುರಿಯುತ್ತಿದ್ದ ಭಯ-ಆತಂಕಗಳ ಬೆವರು... ಅದು ಕೇವಲ ಬೆವರಲ್ಲ ಅದರ ಸ್ಮ್ರುತಿ ನೆತ್ತರಿನಂತೆ ಇರುತ್ತಿತ್ತು, ಅದು ಈಗ ಮತ್ತೊಮ್ಮೆ ಪ್ರಕಟವಾಗುತಿತ್ತು.
ಈ ಬಾರಿ ಅಂತಹ ಕ್ಷಣಗಳಿಗೆ ಸೀಮಿತಗೊಳ್ಳುವ ಯಾವುದೇ ಕಾರಣಗಳಿರಲಿಲ್ಲ....ಆದರೂ..ಇವತ್ತಿನ ದಿನ, ಅದನ್ನು ಪ್ರಕಟಿಸುವಂತೆ ಒತ್ತಾಯಗೊಳಿಸುತ್ತಿದ್ದವು.
ಏಕೆಂದು ತುಂಬಾ ಯೋಚಿಸಿದೆ... ಮತ್ತೊಮ್ಮೆ ನೆನೆಸಿಕೊಂಡೆ...,
*******
ನನ್ನ ಬಳಿ ಎಷ್ಟು ಸಾಧ್ಯವೋ ಅಷ್ಟು ಪ್ರಖ್ಯಾತ ಕುಖ್ಯಾತರನ್ನೆಲ್ಲ ಭೇಟಿ ಮಾಡಿದೆ, ಊಹೂಂ ಏನೂ ಪ್ರಯೋಜನವಾಗಲಿಲ್ಲ.ಹೀಗೆ ಒಮ್ಮೆ ಈ ಹಾದಿಯಲ್ಲಿ ಹುಡುಕುವಾಗ ಕಂಬಳಿಹೊದ್ದ ವ್ಯಕ್ತಿಯಬ್ಬ,
 " ನಿನ್ನ ಸಮಸ್ಯೆ ಪೂರ್ಣವಾಗಿ ಮಾನಸಿಕ ವ್ಯಾಧಿಗೆ ಸಂಭಂಧಪಟ್ಟಿದದೂ ಅಲ್ಲ, ಬೇರೆಯವರ ಕೈಯಲ್ಲಿರುವ ಕ್ಷುದ್ರ ಗಣಾಧಿಗಳ ಬಗೆಗೂ ಅಲ್ಲ. ಆದ್ದರಿಂದ ನೀನು ನಿನ್ನ ಸಮಸ್ಯೆಯನ್ನು ಅಂತಹ ವ್ಯಕ್ತಿಯ ಬಳಿಗೆ ಕೊಂಡೆಯ್ಯಬೇಕಾಗುತ್ತದೆ , ಆತ ಮೂಲತಃ ಮಾನಸಿಕ ವ್ಯಾಧಿಯನ್ನೂ ಜೊತೆಗೆ ಮಾಂತ್ರಿಕ ಸಂಗತಿಗಳನ್ನೂ ಸರಿಸಮಾನಾಗಿ ಬಲ್ಲ ಮೇಧಾವಿಯಾಗಿರಬೇಕು. "
ತಟ್ಟನೆ ನೆನೆಪಾದದ್ದು ಆಪ್ತಮಿತ್ರದ ವಿಜಯ್, ನನ್ನ ಮೂರ್ಖತನದ ಯೋಚನೆಗೆ ನನಗೇ ನಗು ಬಂತು. ಏಕೆಂದರೆ ಚಲನಚಿತ್ರಗಳು ನಿಜವಾಗುವುದಿಲ್ಲವಲ್ಲ.
" ಆದರೆ , ಅಂತಹ ವ್ಯಕ್ತಿಯಾದರೂ ಎಲ್ಲಿರಿವರು? "
ಆತ ಹೇಳಿದ ವಿಳಾಸ ಹುಡುಕಿಕೊಂಡು ಹೋಗೋಣ ಎಂದರೆ, ಆ ವಿಳಾಸ ಸಿನಿಮೀಯವಾಗಿತ್ತು. ಆದರೂ ಈ ನಡುವಿನ ನನ್ನ ಜೀವನ ಇದಕ್ಕೂ ಹೆಚ್ಚಿನ ನನಗೊಬ್ಬನಿಗೇ ತಿಳಿಯುವ ಸಿನಿಮೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿತ್ತು. ಅನ್ಯ ಮಾರ್ಗವಿಲ್ಲದೆ ಹುಡುಕಿ ಹೊರಟೆ.
ಕೊನೆಗೂ ದೊರಕಿತು, ಮನೆಯ ಮುಂದೆ ಕೂಗಿಹೇಳುತ್ತಿದ್ದ  ’ ಡಾ|| ಶಶಿಧರ್ : ಮನೋವೈದ್ಯರು ’ ಎಂಬ ಸೂಚನಾಫಲಕ ನಾನು ಸರಿಯಾದ ವಿಳಾಸಕ್ಕೇ ಬಂದಿದ್ದೇನೆ ಎಂದು ಸಾರಿಹೇಳುತಿದ್ದವು. ಮನೆಯ ಬಾಗಿಲುತಟ್ಟಿದಾಗ ಒಂದು ಅರವತ್ತೈದು ವರ್ಷದ ಸ್ಪ್ರುರದ್ರೂಪಿ ವ್ಯಕ್ತಿಯೊಬ್ಬ ಬಾಗಿಲುತೆರೆದ,
ಯಾವುದೇ ಸೂಚನೆ ಇಲ್ಲದೆ ಬಂದಿದ್ದರಿಂದಲೋ ಎನೋ ಒಂದು ಕ್ಷಣ ಗಾಬರಿಯಾದವನಂತೆ ಕಂಡರೂ ಮತ್ತೆ ಚೇತರಿಸಿಕೊಂಡ.
" ಹಲೋ, ಯಾರು ನೀವು? ನನ್ನಿಂದ ಎನಾಗಬೇಕಿತ್ತು? " ಎಂಬ ಸಾಮಾನ್ಯ ಕುಶಲೋಪರಿಗೆ, ಹೀಗೆ ನಾನು ಇಂತಹ ವ್ಯಕ್ತಿ, ನನ್ನನ್ನು ಕಂಬಳಿಹೊದ್ದ ವ್ಯಕ್ತಿಯೊಬ್ಬ ಇಲ್ಲಿಗೆ ಕಳುಹಿಸಿದ ಎಂದು ಸವಿವರವಾಗಿ ತಿಳಿಸಿದೆ. ಆ ನಂತರ ಆತ ನಾನು ಆತನ ಒಬ್ಬ ಗ್ರಾಹಕ(?) ಎಂದು ತಿಳಿದು ಮನೆಯೊಳಕ್ಕೆ ಬರಮಾಡಿಕೊಂಡ.
 ಸಾಮಾನ್ಯ ಭಾರತೀಯ ಸಂಸ್ಕ್ರತಿಯಂತೆಯೇ ಆತ ಸೋಫ಼ಾದಲ್ಲಿ ಆಸೀನನಾಗಲು ತಿಳಿಸಿ ತಾನು ಟೀ-ಕಾಫಿತರುತ್ತೇನೆಂದು ಒಳಕೋಣೆಯೊಂದರ ಒಳಕ್ಕೆ ಹೊರಟ.
ಆತನ ಮನೆ ಮೊದಲ ಬಾರಿಗೆ ಸಾಮಾನ್ಯ ಮನೋವೈದ್ಯರೊಬ್ಬರ ವಾಸಗ್ರಹದಂತೆ ಕಂಡರೂ, ಅದರ ಒಳ ಹಕೀಕತ್ತನ್ನು ಗಮನಿಸಲು ನನಗೆ ಕೆಲವು ಕ್ಷಣಗಳೇ ಹಿಡಿದವು. ಸಾಮಾನ್ಯ ಅಲಂಕಾರಿಯಂತೆ ಕಾಣುತಿದ್ದ ಶೋಕೇಸ್ ನಿಜವಾದ ರೂಪ ನಿಧಾನವಾಗಿ ಗೋಚರಿಸಿತು.
ಒಡನೆಯೇ ಕನ್ನಡಿಯಂತೆ ಕಾಣುತ್ತಿದ್ದ ವಸ್ತು ನಿಜವಾಗಿಯೂ ಸ್ಪಟಿಕದ ತಲೆಬುರುಡೆಯಾಗಿತ್ತು!! , ಬಿಳಿಯ ಪುಂಕಾನು ಪುಂಕಾಗಿ ಕಾಣುತ್ತಿದ್ದ ಕೂದಲು ಅಸಲಿಯಾಗಿ ಹಿಮಕರಡಿಯೊಂದರ ರೋಮಗಳಾಗಿತ್ತು. ಈ ಮುಂದುವರೆದ ನಾಗರೀಕತೆಯಲ್ಲಿಯೂ ಇದನೆಲ್ಲ ಮನೆಯಲ್ಲಿ ಇಟ್ಟುಕೊಂಡಿರುವುದು ವಿಚಿತ್ರವೆನಿಸಿತು. ಹೋಗಲಿ ಅವರವರ ನಂಬಿಕೆಗೆ ನಾವು ಕೈ ಹಾಕುವುದು ಹೇಗೆ? ಅದು ಅವರಿಷ್ಟ, ಮುಂದಿನ ವಸ್ತು...,
" ಏನು ಹುಡುಕುತಿದ್ದೀರಿ? "
" ಏನೂ.. ಏನೂ ಇಲ್ಲ..! " ಹಠಾತ್ತನೆ ಬಂದ ಆ ಪ್ರಶ್ನೆಗೆ ನಾನು ಬೆಚ್ಚಿಬಿದ್ದೆ.!
" ಇರಲಿ ಬಿಡಿ , ಇಲ್ಲಿಗೆ ಬರುವ ಎಲ್ಲ ರೋಗಿಗಳೂ ಇದೇ ಕುತೂಹಲ ಹೊಂದಿರುತ್ತಾರೆ! ನೀವೇನೂ ಬೇರೆಯಲ್ಲ "
" ನಾನೇನೂ ರೋಗಿಯಲ್ಲ...! "
" ಅದು ಇನ್ನೂ ಈಗಲೇ ಖಚಿತ ವಾಗಿ ನಿರ್ಧಾರ ಮಾಡುವಂತಹುದಲ್ಲ..ಅದು ಸರಿ ನೀವು ಇಲ್ಲಿಗೆ ಬಂದ ನಿಜವಾದ ಕಾರಣವನ್ನು ತಿಳಿಯುವ ಸಮಯ ಹತ್ತಿರವಾಗಿದೆ. ಬನ್ನಿ ನಮ್ಮ ಆಸ್ಪತ್ರೆಗೆ ಹೋಗೋಣ,ಅಲ್ಲಿಯೇ ನನ್ನ ಎಲ್ಲ ಪರಿಕರಗಳು ಲಭ್ಯವಿರುವುದು.  "
ಆತನ ಆಸ್ಪತ್ರೆ ಆತನ ಮನೆಯಷ್ಟು ವಿಚಿತ್ರವಾಗೇನೂ ಇರಲಿಲ್ಲ. ಅದೊಂದು ಮಾಮೂಲಿ ಮನೋವೈದ್ಯರೊಬ್ಬರ ಸಾಧಾರಣ ಸಣ್ಣ ಕ್ಲೀನಿಕ್ ಆಗಿತ್ತು.
" ಸರಿ ಈಗ ಹೇಳಿ ನಿಮ್ಮ ತೊಂದರೆ ಏನು ? ಅದು ಎಂದು ಆರಂಭವಾಯಿತು ? ಯಾವ ಕಾರಣದಿಂದ ಎಂಬ ಎಲ್ಲ ವಿಷಯ ಮೊದಲಿನಿಂದ ಹೇಳಿ.. " ಮೊದಲಿಗೆ ಆತನೇ ಮೊದಲು ಪ್ರಾರಂಭಿಸಿದ.
ನಾನು ನನ್ನ ಪೂರ್ತಿ ಕತೆ ಹೇಳಲು ಪ್ರಾರಂಭಿಸಿದೆ.
" ಸಾರ್ ನಾನು ಇಲ್ಲಿಗೆ ಸುಮಾರು ೨೦೦ ಕಿ.ಮೀ. ದೂರದ ಬೆಂಗಳೂರಿನವನು. ನನ್ನ ಜೀವನ ಈ ೩೬  ವರ್ಷದವರೆಗೂ ಎಲ್ಲರಂತೆಯೇ ಇತ್ತು. ನಾನು ಷೇರು ಮಾರುಕಟ್ಟೆ ಹೂಡಿಕೆದಾರನಾಗಿದ್ದೆ. ಎಲ್ಲ ಸುಸೂತ್ರವಾಗಿಯೇ ನೆಡೆಯುತಿದ್ದ ಆ ಸಮಯದಲ್ಲಿ ಮುಂಬೈ ನಿಂದ ಒಮ್ಮೆ ವಾಪಸ್ಸು ಬರುವಾಗ ಟ್ರೇನ್ ನಲ್ಲಿ ಒಬ್ಬ ಕಡಲೇಕಾಯಿ ಇತ್ಯಾದಿಗಳನ್ನು ಮಾರುತ್ತಿದ್ದ ವ್ಯಕ್ತಿಯೊಬ್ಬ ,
’ ನೀವ್ ಯಾವಾಗ್ಲೂ ಕಾಲ್ಗೆ ಹೀಗೆ ಪ್ಲಾಸ್ಟಿಕ್ ಹಾಕ್ಕೊಂಡೇ ಇರ್ತೀರಾ ದಣೀ? ’ ಎಂದ.
ನನಗೆ ಅಂದು ನಿಜವಾಗಿ ಕುತೂಹಲ ಉಂಟಾಯಿತು. ನನಗೆ ಹೀಗೆ ಪ್ಲಾಸ್ಟಿಕ್ ನಿಂದ ಕಾಲು ಯಾವಾಗಲೂ ಮುಚ್ಚಿಕೊಂಡಿರುವಂತೆ ಆಪರೇಷನ್ ಮಾಡಲಾಗಿತ್ತು. ನನಗೆ ಈ ಮೊದಲು ಕುತೂಹಲ ಉಂಟಾಗಿ ಅದರೆ ಬಗ್ಗೆ ನಾನು ತಿಳಿದುಕೊಳ್ಳಲು ಬಯಸಿದಾಗಲೆಲ್ಲ ಅದರ ಬಗ್ಗೆ ಎಂದೂ ಕೇಳಲೇ ಬಾರದೆಂಬ ಅಪ್ಪನ ಕಟ್ಟಪ್ಪಣೆ ಕುತೂಹಲವನ್ನು ಶಮನಮಾಡುತಿತ್ತು. ಅದರ ಬಳಿಕ ನನ್ನ ಕಾಲಿಗೆ ಯಾವುದೋ ತೊಂದರೆ ಇರಬೇಕು ಎಂದು ಸುಮ್ಮನಾಗಿದ್ದೆ.
ಆದರೆ ಈಗ...ನಾನು ಸ್ವತಂತ್ರ... ನಾನು ಅದರ ಬಗ್ಗೆ ತಿಳಿದುಕೊಳ್ಳಲು ನನ್ನ ತಂದೆಯ ಯಾವುದೇ ಆಕ್ಷೇಪಣೆ ಇಲ್ಲ ಏಕೆಂದರೆ ಆ ಘಟನೆ ನೆಡೆಯುವ ಮೂರು ವರ್ಷಗಳ ಮುಂಚೆಯೇ ನನ್ನ ಅಪ್ಪ ನನ್ನನ್ನು ತ್ಯಜಿಸಿದ್ದರು ದೈವಾದೀನರಾಗಿರಲಿಲ್ಲ ಕಾಣೆಯಾಗಿದ್ದರು,ಎರಡು ತಿಂಗಳು ಹುಡುಕಿಸಿದರೂ ಅವರು ಸಿಗಲಿಲ್ಲಿ.ಊರಿನಲ್ಲಿ ಅವರ ಮುಖಕ್ಕೆ ಆದಂತೆ ಅವರ ಮೈಗೂ ಅದ್ದರಿಂದ ಸತ್ತುಹೋಗಿದ್ದಾರೆಂದು ಸುದ್ದಿ ಹರಡಿತ್ತು ನಾನು ನಂಬಲಿಲ್ಲ ಆದರೂ ಅವರು ಪತ್ತೆಯಾಗಲಿಲ್ಲ,ಆದ್ದರಿಂದ ಈಗ ಕಾಲಿನ ಪ್ಲಾಸ್ಟಿಕ್ ಬಗ್ಗೆ ತಿಳಿಯುವುದಕ್ಕೆ ಯಾವುದೇ ಅಡ್ಡಿಯಿರಲಿಲ್ಲ. ಅದಕ್ಕೇ ಈ ಬಾರಿ ಅದನ್ನು ತಿಳಿದುಕೊಳ್ಳುವ ಆಸಕ್ತಿಯುಂಟಾಯಿತು.ಅದಕ್ಕೆ ಮನೆಗೆ ಹೋದ ತಕ್ಷಣ ಮೊದಲು ಆ ಪ್ಲಾಸ್ಟಿಕ್ ಕವರನ್ನು ಬಿಚ್ಚಲು ಪ್ರಯತ್ನಿಸಿದೆ. ಆದರೆ, ಅದಕ್ಕೂ ನನ್ನ ಚರ್ಮ ಪಂಚೇಂದ್ರಿಯಕ್ಕೂ ಜನ್ಮಗಳ ನಂಟೋ ಎಂಬಂತೆ ಒಂದಾಗಿಬಿಟ್ಟಿದ್ದವು. ಎರಡು ದಿನ ತಡೆದು ನಂತರ ಪರಿಚಯದ ವೈದ್ಯನೊಬ್ಬನ ಬಳಿ ಹೋದೆ. ಆತ ನನ್ನ ಚರ್ಮದಿಂದ ಅದನ್ನು ಬೇರ್ಪಡಿಸಿ ಆಗ ಶುರುವಾದ ರಕ್ತಸ್ರಾವ ನಿಲ್ಲಿಸಲು ಬ್ಯಾಂಡೇಜನ್ನು ಸುತ್ತಿ ಕಳುಹಿಸಿದ. ಎರಡುವಾರಗಳ ನಂತರ ನನ್ನ ಕಾಲು ಸರಿ ಹೋಯಿತು.ನಂತರ ಅದನ್ನು ತೆಗೆದು ನೋಡಿದೆ.ಸ್ವಲ್ಪ ನೀಲಿಗಟ್ಟಿದ್ದು ಬಿಟ್ಟರೆ ಇನ್ನೇನೂ ತೊಂದರೆ ಇರಲಿಲ್ಲ..ಆ.."
" ನಿಮ್ಮ ತಂದೆಯ ಮಾತನ್ನು ಮೀರಿದೆ ಎಂದು ನಿಮಗನ್ನಿಸಿಲಿಲ್ಲವೇ?!! "
" ಇಲ್ಲ...ಇಷ್ಟು ವರ್ಷಗಳವರೆಗೂ ಅದನ್ನು ಎನೆಂದೇ ತಿಳಿಸದೆ ಇರದದ್ದು ಅವರ ತಪ್ಪು.... "
" ಆದರೂ...ಇರಲಿ ಬಿಡಿ ನಿಮ್ಮ ಮಾತು ಮುಂದುವರೆಸಿ "
" ಸರಿ...ಆ ನಂತರ ನನ್ನ ಕಾಲನ್ನು ಬುದ್ದಿಬಂದಮಟ್ಟಿಗೆ ಮೊದಲ ಬಾರಿಗೆ ನೆಲದಮೇಲಿರಿಸಿದೆ
ಗಾಜಿನಂತೆ ಪ್ರತಿಫಲಿಸುತಿದ್ದ ಆ ನೆಲದಲ್ಲಿ ನನ್ನ ನೀಲಿಗಟ್ಟಿದ ಕಾಲು ಬಣ್ಣದಲ್ಲದ್ದಿದ ಕುಂಚವು ಹೇಗೆ ನೀರಿನಲ್ಲಿ ತನ್ನ ಪ್ರಸಿದ್ಧಿಯನ್ನು ಹರಡುವುದೋ ಹಾಗೆ ನೀಲಿ ಬಣ್ಣವು ಪಸರಿಸುವಂತೆ ಭಾಸವಾಯಿತು. ಎದ್ದು ನಿಂತೆ, ಈ ಬೆತ್ತಲೆ ಕಾಲುಗಳು ನೆಲದ ತಣ್ಣನೆಯ ಸ್ಪರ್ಶವನ್ನು ನನಗೆ ದೊರಕಲು ಸಹಕರಿಸಿತು. ನನ್ನ ಕೋಣೆಯಲಿದ್ದ ನಾನು ಬಾಲ್ಕನಿಯವರೆಗೆ ನೆಡೆದು ಬಂದೆ.ಅದೇ ಹೊಸ ಚೈತನ್ಯದ ಪುಳಕ. ಹಿಂದಿರುಗಲು ತಿರುಗಿದಾಗ ನನ್ನ ಕಣ್ಣುಗಳು ಈಗ ಸೋತುಹೋದವೇನೋ ಎಂಬಂತೆ ಅನ್ನಿಸಿತು. ಏಕೆಂದರೆ ನಾನು ಪಾದವಿಟ್ಟಲ್ಲೆಲ್ಲ ನೀಲಿ ಬಣ್ಣದ ಹೆಜ್ಜೆಗಳ ಪ್ರತಿ ಬಿದ್ದಿತ್ತು!!! ಹಾಗು...  "
" ನೀನು ಕಾಲಿಟ್ಟಲೆಲ್ಲ ಅದು ಪಸರಿಸುತಿತ್ತು..!!! ನಿಮ್ಮಲ್ಲಿ ವೈಚರೀತ್ಯದ ಕುತೂಹಲ ಅತೀವ ಸಂತೋಶವಾಗಿ ಮಾರ್ಪಾಡಾಯಿತು ಹೌದೇ? "
" ಹೌದು!!ನಿಮಗೆ ಹೇಗೆ ತಿಳಿಯಿತು? "
" ಅದಕ್ಕೇ ನನ್ನನ್ನು ವೈದ್ಯನೆನ್ನುತ್ತಾರೆ " ಎಂದು ಸಣ್ಣನೆ ನಕ್ಕರು ಶಶಿಧರ್......
Contiues........................................... in next post........